ನವೆಂಬರ್ 1 ರಿಂದ ಎಚ್.ಡಿ ಕುಮಾರಸ್ವಾಮಿ ರಾಜ್ಯ ಪ್ರವಾಸ

ಬೆಂಗಳೂರು: ಈಗಷ್ಟೇ ಚೇತರಿಸಿಕೊಂಡಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ನವೆಂಬರ್ 1ರಿಂದ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಮನೆ ಮಾಡಿದರು, ಪ್ರವಾಸ ಮಾಡಲು ಸಾಧ್ಯವಾಗಿರಲಿಲ್ಲ, ನ.1ರ ತನಕ ಯಾರು ನನ್ನನ್ನು ನೋಡಲು ಬರುವುದು ಬೇಡ, ನಾನೇ ನಿಮ್ಮ ಬಳಿಗೆ ಬರುತ್ತೇನೆ ಎಂದರು. ಮುಂದಿನ ದಸರಾಗೆಯಾರು ಚಾಲನೆ ನೀಡುತ್ತಾರೆ ಎಂದು ತಾಯಿ ಚಾಮುಂಡೇಶ್ವರಿ ನಿರ್ಧರಿಸುತ್ತಾಳೆ. ನಾನೇ ಮುಂದಿನ ಸಿಎಂ ಎಂಬಭ್ರಮೆಯಿಂದ ಸಿಎಂ ಸಿದ್ದರಾಮಯ್ಯ ಹೊರ ಬರಬೇಕು, ಹಣ ಹಂಚಿ, ಜಾತಿ ಜಾತಿಗಳನ್ನು ಎತ್ತಿಕಟ್ಟಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರೆ ಅದು ಸಾಧ್ಯವಿಲ್ಲ ಎಂದರು.
Comments