ಬಿಬಿಎಂಪಿಯ 51ನೇ ಮೇಯರ್ ಆಗಿ ಸಂಪತ್ ರಾಜ್ ಆಯ್ಕೆ : ಕಾಂಗ್ರೆಸ್-ಜೆಡಿಎಸ್ ಗೆಳತನಕ್ಕೆ ಮತ್ತಷ್ಟು ಮೆರಗು
ಬಿಬಿಎಂಪಿ ಚುನಾವಣಾ ಪ್ರಕ್ರಿಯೆ ಮುಗಿದಿದ್ದು, ಕಾಂಗ್ರೆಸ್-ಜೆಡಿಎಸ್ ಈ ಮೇಯರ್ ವಾರ್ ಗೆದ್ದಿದೆ. 51ನೇ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ ಸಂಪತ್ ರಾಜ್ ಆಯ್ಕೆಯಾಗಿದ್ದು, ಉಪ ಮೇಯರ್ ಹುದ್ದೆ ಜೆಡಿಎಸ್ ಪಾಲಾಗಿದೆ.
ಬಿಬಿಎಂಪಿಯ 51ನೇ ಮೇಯರ್ ಆಗಿ ಸಂಪತ್ ರಾಜ್ ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿಗೆ ಜಯವಾಗಿದೆ. ಈ ಮೂಲಕ ಅಧಿಕಾರದ ಕನಸು ಕಂಡಿದ್ದ ಬಿಜೆಪಿಗೆ ತೀವ್ರ ನಿರಾಸೆಯಾಗಿದೆ.ಡಿ.ಜೆ.ಹಳ್ಳಿಯಿಂದ 2 ಬಾರಿ ಕಾರ್ಪೊರೇಟರ್ ಆಗಿರುವ ಸಂಪತ್ ರಾಜ್ ಈ ಬಾರಿ ಬಿಬಿಎಂಪಿಯ ಮೇಯರ್ ಆಗಿದ್ದಾರೆ. ಬಿಜೆಪಿ ಸಭಾತ್ಯಾಗ ಮಧ್ಯೆಯೇ ಚುನಾವಣಾಧಿಕಾರಿ ಜಯಂತಿಯವರು ಸಂಪತ್ ರಾಜ್'ರನ್ನು ನೂತನ ಮೇಯರ್ ಆಗಿ ಅಧಿಕೃತವಾಗಿ ಘೋಷಿಸಿದ್ದಾರೆ.
Comments