1.38 ಲಕ್ಷ ಜನರಿಗೆ ಪುನೀತ ಯಾತ್ರೆ

28 Sep 2017 12:10 PM |
2169 Report

ದಕ್ಷಿಣ ಕನ್ನಡದ ಪವಿತ್ರ ಸ್ಥಳಗಳು, ಹೊಯ್ಸಳ ಮತ್ತು ಗೊಮ್ಮಟೇಶ್ವರ ಯಾತ್ರೆ, ಉತ್ತರ ಕರ್ನಾಟಕ ಪ್ರವಾಸ, ದಕ್ಷಿಣ ಭಾರತದ ಪವಿತ್ರ ಕ್ಷೇತ್ರಗಳು, ತಿರುಪತಿ ದರ್ಶನ, ತಿರುಪತಿ– ಕಾಳಹಸ್ತಿ ಭೇಟಿ, ದಕ್ಷಿಣ ಭಾರತದ ಪ್ರಸಿದ್ಧ ದೇವಸ್ಥಾನಗಳು, ಮಂತ್ರಾಲಯ ಮತ್ತು ಶಿರಡಿ ಟ್ರಿಪ್‌ ಆರಂಭಿಸಲಾಗಿದೆ.

 
ಬೆಂಗಳೂರು: ಪುನೀತ ಯಾತ್ರೆ ಯೋಜನೆಯಡಿ ಪ್ರತಿವರ್ಷ 1.38ಲಕ್ಷ ಜನರನ್ನು ತೀರ್ಥಕ್ಷೇತ್ರಗಳಿಗೆ ಪ್ರವಾಸ ಕರೆದೊಯ್ಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪುನೀತ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಮತ್ತು ಹೊರ ರಾಜ್ಯಗಳ ಪ್ರಮುಖ ಧಾರ್ಮಿಕ, ಐತಿಹಾಸಿಕ, ಪಾರಂಪರಿಕ ಸ್ಥಳಗಳಿಗೆ ಶೇ 25ರಷ್ಟು ರಿಯಾಯಿತಿ ದರದಲ್ಲಿ ಎಲ್ಲಾ ಧರ್ಮದ ಪ್ರವಾಸಿಗರನ್ನು ಕರೆದೊಯ್ಯುಲಾಗುವುದು’ ಎಂದರು.

ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಮೊದಲ ಹಂತದಲ್ಲಿ 9 ಮಾರ್ಗಗಳಲ್ಲಿ ಪ್ರವಾಸ ಆರಂಭಿಸಲಾಗಿದೆ. ದಕ್ಷಿಣ ಕನ್ನಡದ ಪವಿತ್ರ ಸ್ಥಳಗಳು, ಹೊಯ್ಸಳ ಮತ್ತು ಗೊಮ್ಮಟೇಶ್ವರ ಯಾತ್ರೆ, ಉತ್ತರ ಕರ್ನಾಟಕ ಪ್ರವಾಸ, ದಕ್ಷಿಣ ಭಾರತದ ಪವಿತ್ರ ಕ್ಷೇತ್ರಗಳು, ತಿರುಪತಿ ದರ್ಶನ, ತಿರುಪತಿ– ಕಾಳಹಸ್ತಿ ಭೇಟಿ, ದಕ್ಷಿಣ ಭಾರತದ ಪ್ರಸಿದ್ಧ ದೇವಸ್ಥಾನಗಳು, ಮಂತ್ರಾಲಯ ಮತ್ತು ಶಿರಡಿ ಟ್ರಿಪ್‌ ಆರಂಭಿಸಲಾಗಿದೆ ಎಂದು ವಿವರಿಸಿದರು.

ಇನ್ನುಳಿದ 12 ಮಾರ್ಗಗಳ ಪ್ರವಾಸ ಅ.15ರಿಂದ ಆರಂಭವಾಗಲಿದೆ. ಕೆ.ಎಸ್‌.ಟಿ.ಡಿ.ಸಿಯ 24 ಎಸಿ ಡಿಲಕ್ಸ್ ಬಸ್‌ಗಳನ್ನು ಈ ಪ್ರವಾಸಕ್ಕೆ ನಿಯೋಜಿಸಲಾಗಿದೆ. ಪ್ರವಾಸಿಗರಿಗೆ ವಾಸ್ತವ್ಯ ಮತ್ತು ಮಾರ್ಗದರ್ಶಕರ ವ್ಯವಸ್ಥೆ ಇರಲಿದೆ. ಊಟದ ವೆಚ್ಚವನ್ನು ಮಾತ್ರ ಪ್ರವಾಸಿಗರೇ ಭರಿಸಬೇಕು ಎಂದರು.

ಆಸಕ್ತರು ಕೆ.ಎಸ್‌.ಟಿ.ಡಿ.ಸಿ ವೆಬ್‌ಸೈಟ್‌ನಲ್ಲಿ (www.kstdc.co) ನೋಂದಣಿ ಮಾಡಿಕೊಳ್ಳಬಹುದು ಎಂದು ಅವರು ವಿವರಿಸಿದರು.

Edited By

Hema Latha

Reported By

congress admin

Comments