ಫೇಸ್ ಬುಕ್ ನಲ್ಲಿ ಅಗ್ರ ಸ್ಥಾನದಲ್ಲಿರುವ ಎಚ್ ಡಿಕೆ

27 Sep 2017 6:21 PM |
2485 Report

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರ ಸ್ವಾಮಿಯವರು ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ ಬುಕ್ ಬಳಸುವ ರಾಜಕಾರಣಿಗಳ ಸಾಲಿನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಎಚ್ ಡಿಕೆ ಯವರ ವೈಯಕ್ತಿಕ ಫೇಸ್ ಬುಕ್ ಪೇಜ್ ಬಿಟ್ಟು ಮುಂಬರುವ ವಿಧಾನ ಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 3 ಫೇಸ್ ಬುಕ್ ಪೇಜ್ ಗಳನ್ನೂ ನಿರ್ವಹಣೆ ಮಾಡಲಾಗುತ್ತಿದ್ದು ,ಈ ನಾಲ್ಕು ಪೇಜ್ ಗಳಿಗೆ 4 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದು ಫೇಸ್ ಬುಕ್ ನಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ.

ಇದೇ ಮೊದಲ  ಬಾರಿಗೆ ಮುಖ್ಯಮಂತ್ರಿ ಅಭ್ಯರ್ಥಿಯ ಪರವಾಗಿ ಇಷ್ಟೊಂದು ಪೇಜುಗಳಿರುವುದು ರಾಜ್ಯದಲ್ಲಿ ಇದೇ ಮೊದಲು . ಕುಮಾರಸ್ವಾಮಿಯವರ ವೈಯಕ್ತಿಕ ಫೇಸ್ ಬುಕ್ ಪೇಜ್ ಗಳಿಗೆ 1.56 ಲಕ್ಷ ಫಾಲೋಹಾರ್ಸ್ ಗಳಿದ್ದಾರೆ. ಅಷ್ಟೇಅಲ್ಲದೆ ಕುಮಾರಸ್ವಾಮಿ ಫಾರ್ ಸಿಎಂ ಪೇಜ್ ಗೆ 1.34 ಲಕ್ಷ , ನಮ್ಮ ಎಚ್ ಡಿಕೆ ಪೇಜ್ ಗೆ 64 ,904 , ಕುಮಾರಸ್ವಾಮಿ ವರ್ಲ್ಡ್ ವೈಡ್ ಫ್ಯಾನ್ಸ್ ಪೇಜ್ ಗೆ 49,366 ಫಾಲೋಹಾರ್ಸ್ ಇದ್ದಾರೆ. ನಂತರ ಫೇಸ್ ಬುಕ್ ಪೇಜ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ರವರಿದ್ದು, 1.36 ಲಕ್ಷ ಫಾಲೋಹಾರ್ಸ್ ಗಳನ್ನು ಹೊಂದಿದ್ದಾರೆ .       

Edited By

Hema Latha

Reported By

jds admin

Comments