ಕರ್ನಾಟಕ ಯುವಕರ ಫೇವರೆಟ್ ಮುಂದಿನ ಮುಖ್ಯಮಂತ್ರಿ ಕುಮಾರಣ್ಣನಂತೆ, ಸಮೀಕ್ಷೆಯಲ್ಲಿ ಬಹಿರಂಗ

“ನಿಮ್ಮ ಆಯ್ಕೆಯ ಮುಂದಿನ ಮುಖ್ಯಮಂತ್ರಿ ಯಾರು?” ಎಂದು ನಡೆಸಿದ ಲೈವ್ ಸಮೀಕ್ಷೆಯಲ್ಲಿ ಜೆಡಿಎಸ್ ಪಕ್ಷದ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಹಾಗೂ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರನ್ನು ಮಣಿಸಿ ಕರ್ನಾಟಕದ ಯುವಕರ ಫೇವರೆಟ್ ಆಗಿ ಹೊರಹೊಮ್ಮಿದ್ದಾರೆ…..
ಕಿರಿಕ್ ಕೀರ್ತಿ ಅವರನ್ನು ಸುಮಾರು 5 ಲಕ್ಷಕ್ಕೂ ಹೆಚ್ಚು ಜನ ಫೇಸ್ ಬುಕ್ ನಲ್ಲಿ ಫಾಲೋ ಮಾಡುತ್ತಾರೆ. ಇದರಿಂದ ಕುಮಾರಸ್ವಾಮಿ ಅವರು ಕನ್ನಡಿಗ ಯುವಕರ ಮನಗೆದ್ದಿದ್ದಾರೆ ಎಂದು ಸ್ಪಷ್ಟವಾಗಿ ಗೋಚರವಾಗುತ್ತದೆ.
ಈ ಸಮೀಕ್ಷೆಯು ಫೇಸ್ ಬುಕ್ ಲೈವ್ ನಲ್ಲಿ ನಡೆದಿದ್ದರಿಂದ ಜನರು ನೇರವಾಗಿ ತಮ್ಮ ನೆಚ್ಚಿನ ಮುಖ್ಯಮಂತ್ರಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಗೋಲ್ ಮಾಲ್ ಮಾಡಲು ಸಾಧ್ಯವಿರುವುದಿಲ್ಲ. ಹಣವಂತ ರಾಷ್ಟೀಯ ಪಕ್ಷಗಳು ಹಣ ನೀಡಿ ಸಮೀಕ್ಷೆ ನಡೆಸಿ ತಮ್ಮ ಪರವಾದ ಫಲಿತಾಂಶ ಬರುವಂತೆ ಮಾಡುವಂತಹ ಈ ಕಾಲದಲ್ಲಿ, ಫೇಸ್ ಬುಕ್ ಲೈವ್ ಸಮೀಕ್ಷೆಯು ಯುವಕರ ನಿಜವಾದ ನಾಡಿಮಿಡಿತವನ್ನು ಎತ್ತಿ ಹಿಡಿದಿದೆ.
ಲೈವ್ ಮತದಾನದಲ್ಲಿ ಶುರುವಿನಿಂದಲೂ ಕೂಡ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ನಡುವೆ ಜಟಾಪಟಿ ಏರ್ಪಟ್ಟಿತ್ತು.. ಆದರೆ, ಕೊನೆಯ 30 ನಿಮಿಷಗಳಲ್ಲಿ ಕುಮಾರಸ್ವಾಮಿ ಅವರು ಯುವಕರ ಮತಗಳನ್ನು ಎತೇಚ್ಛವಾಗಿ ಪಡೆದು ಯಡಿಯೂರಪ್ಪ ಅವರನ್ನು 933 ಮತಗಳಿಂದ ಪರಾಭವಗೊಳಿಸಿದರು. ಮತದಾನ ಮುಗಿದಾಗ ಸಿದ್ದರಾಮಯ್ಯ ಅವರು 1882 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರೆ, ಯಡಿಯೂರಪ್ಪ ಅವರು 7522 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಳ್ಳಬೇಕಾಯಿತು .ಜೆಡಿಎಸ್ ನ ಕುಮಾರಸ್ವಾಮಿ 8455 ಮತಗಳನ್ನು ಪಡೆದು ಎದುರಾಳಿಗಳನ್ನು ಮಣಿಸಿದ್ದಾರೆ .
Comments