ಜೆಡಿಎಸ್ ನಿಂದ ಬಿಬಿಎಂಪಿ ಉಪಮೇಯರ್ ಆಯ್ಕೆ ಬಹುತೇಕ ಫಿಕ್ಸ್
ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಉಪಮೇಯರ್ ಸ್ಥಾನ ಒಕ್ಕಲಿಗ ಸಮುದಾಯದ ಮಹಿಳೆಗೆ ಒಲಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ನಿನ್ನೆ ನಡೆದ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಕ್ಕಲಿಗ ಸಮುದಾಯದ ಅಭ್ಯರ್ಥಿ ಬದಲಿಗೆ ಹಿಂದುಳಿದ ವರ್ಗಕ್ಕೆ ಸೇರಿದ……
ರಾಜಗೋಪಾಲನಗರ ವಾರ್ಡ್‍ನ ಜೆಡಿಎಸ್ ಸದಸ್ಯೆ ಪದ್ಮಾವತಿ ನರಸಿಂಹಮೂರ್ತಿ ಬಿಬಿಎಂಪಿಯ ಮುಂದಿನ ಉಪಮೇಯರ್ ಆಗಿ ಆಯ್ಕೆ ಆಗುವುದು ಬಹುತೇಕ ಖಚಿತಪಟ್ಟಿದೆ ಪದ್ಮಾವತಿ ಅವರನ್ನೇ ಉಪಮೇಯರ್ ಸ್ಥಾನಕ್ಕೆ ತರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಹಾಲಿ ಲೆಕ್ಕಪತ್ರ ಸ್ಥಾಯಿಸಮಿತಿ ಅಧ್ಯಕ್ಷೆ ನೇತ್ರಾನಾರಾಯಣ್, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ನಾರಾಯಣಸ್ವಾಮಿ ಹಾಗೂ ಜೆಡಿಎಸ್ ಗುಂಪಿನ ನಾಯಕಿ ರಮಿಳಾ ಉಮಾಶಂಕರ್ ಅವರಲ್ಲಿ ಒಬ್ಬರು ಉಪಮೇಯರ್ ಸ್ಥಾನ ಅಲಂಕರಿಸುವ ಸಾಧ್ಯತೆ ಇತ್ತು. ಆದರೆ, ಪದ್ಮಾವತಿ ಅವರ ಹೆಸರನ್ನು ಸ್ವತಃ ದೇವೇಗೌಡರೇ ಸೂಚಿಸಿರುವುದರಿಂದ ಉಪಮೇಯರ್ ಆಗಿ ಪದ್ಮಾವತಿ ನರಸಿಂಹಮೂರ್ತಿ ಆಯ್ಕೆಯಾಗುವುದು ಬಹುತೇಕ ಖಚಿತಪಟ್ಟಿದೆ. ಹೀಗಾಗಿ ಇದೇ 28ರಂದು ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ರಾಜಗೋಪಾಲನಗರ ವಾರ್ಡ್‍ನ ಪದ್ಮಾವತಿ ನರಸಿಂಹಮೂರ್ತಿ ನಾಮಪತ್ರ ಸಲ್ಲಿಸಲಿದ್ದಾರೆ.
Comments