ಬಿಬಿಎಂಪಿ ಮೈತ್ರಿಗೆ ಕಾಂಗ್ರೆಸ್, ಜೆಡಿಎಸ್ ಸಹಮತ
ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸಂಪೂರ್ಣ ಚಿತ್ರಣ ಸಿಕ್ಕಿದೆ. ಈ ಬಾರಿಯೂ ಕಾಂಗ್ರೆಸ್ ಮೇಯರ್ ಪಟ್ಟ ಉಳಿಸಿಕೊಂಡಿದ್ದು, ಜೆಡಿಎಸ್ ಉಪ ಮೇಯರ್ ಪಟ್ಟ ಪಡೆಯಲಿದೆ. ಸೆ.28ರಂದು ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ.
ಜೆಡಿಎಸ್ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರು ನಿನ್ನೆ ಕಾಂಗ್ರೆಸ್ ನಾಯಕರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಮಾತುಕತೆ ನಡೆಸಿದರು. ಮಾತುಕತೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದೇವೆ. ಅವರು ಯಾರನ್ನು ಬೇಕಾದರೂ ಮೇಯರ್ ಮಾಡಲಿ. ಜೆಡಿಎಸ್ ಪಕ್ಷಕ್ಕೆ ಉಪ ಮೇಯರ್ ಸ್ಥಾನ ಸಿಗಲಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ, ನಗರ ಯೋಜನೆ ಸಮಿತಿ ಸೇರಿದಂತೆ ಪ್ರಮುಖ ನಾಲ್ಕು ಸಮಿತಿಗಳು ಜೆಡಿಎಸ್ ಗೆ ಸಿಗಲಿದೆ.
ಮೇಯರ್ ಚುನಾವಣೆ ಸೆ.28ರಂದು ನಡೆಯಲಿದ್ದು, ಮತಯಾಚನೆ ಮಾಡಲು ಎಲ್ಲಾ ಸದಸ್ಯರೂ 11.30ಕ್ಕೆ ಬಿಬಿಎಂಪಿ ಕಚೇರಿ ಬಳಿ ಬರಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
Comments