ಎಚ್ಡಿಕೆಗೆ ಶುಭ ಹಾರೈಕೆಯ ಮಾತುಗಳನ್ನು ಹೇಳಿದ ಜೆಡಿಎಸ್ ಬಂಡಾಯ ಶಾಸಕ ಜಮೀರ್ !!
ಹೃದಯ ಸಂಬಂಧಿ ಶಸ್ತ್ರಸಿಕಿತ್ಸೆಗೆ ಒಳಗಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ. ಕುಮಾರಸ್ವಾಮಿ ಅವರಿಗೆ ಶೀಘ್ರ ಗುಣಮುಖರಾಗುವಂತೆ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಖಾನ್ ಟ್ವಿಟ್ಟರ್ ನಲ್ಲಿ ಶುಭ ಹಾರೈಸಿದ್ದಾರೆ ಮತ್ತು….
"ಬೇಗ ಚೇತರಿಸಿಕೊಳ್ಳಿ ಶ್ರೀ ಎಚ್ ಡಿ ಕುಮಾರಸ್ವಾಮಿ" ಎಂದು ಜಮೀರ್ ಅಹಮದ್ ಟ್ವೀಟ್ ಮಾಡಿದ್ದಾರೆ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರೂ ಅಲ್ಲ ಎಂಬುವುದಕ್ಕೆ ಇದು ಒಂದು ತಾಜಾ ಉದಾಹರಣೆಯಾಗಿದೆ.ರಾಜ್ಯಸಭೆ ಚುನಾವಣೆ ಬಳಿಕ ಜಮೀರ್ ಹಾಗೂ ಕುಮಾರಸ್ವಾಮಿ ನಡುವೆ ಹಾಗಾಗ ಸವಾಲ್ ಪ್ರತಿ ಸವಾಲಿನ ಮಾತುಗಳು, ಒಬ್ಬರಿಗೊಬ್ಬರು ಎಷ್ಟೇ ಬೈದಾಡಿಕೊಂಡರು ಇದೀಗ ಎಚ್ಟಿಕೆ ಆರೋಗ್ಯದ ಬಗ್ಗೆ ಶುಭ ಹಾರೈಸಿರುವ ಜಮೀರ್, ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಎಂದು ಸಂದೇಶ ನೀಡಿದ್ದಾರೆ.
Comments