ಕುಮಾರಸ್ವಾಮಿ ಇಂದು ಐಸಿಯುನಿಂದ ವಿಶೇಷ ವಾರ್ಡ್‍ಗೆ ಶಿಫ್ಟ್ ಸಾಧ್ಯತೆ
ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ ಕಂಡುಕೊಳ್ಳುತ್ತಿದ್ದು, ಇಂದು ಐಸಿಯುನಿಂದ ವಾರ್ಡ್‍ಗೆ ಶಿಫ್ಟ್ ಆಗಲಿದ್ದಾರೆ…
ಬನ್ನೇರುಘಟ್ಟ ರಸ್ತೆಯ ಅಪೊಲೊ ಆಸ್ಪತ್ರೆಯಲ್ಲಿ ಕಳೆದ ಶನಿವಾರ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕುಮಾರಸ್ವಾಮಿ ಅವರನ್ನು ಇಂದು ಸಂಜೆ ಐಸಿಯುನಿಂದ ವಿಶೇಷ ವಾರ್ಡ್‍ಗೆ ಸ್ಥಳಾಂತರ ಮಾಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸ್ಥಳಾಂತರಕ್ಕೆ ಮುನ್ನ ಅವರ ಆರೋಗ್ಯ ಸ್ಥಿತಿಯನ್ನು ಇನ್ನೊಮ್ಮೆ ತಪಾಸಣೆಗೆ ಒಳಪಡಿಸಲಿದ್ದು, ಇನ್ನೊಂದು ದಿನ ಐಸಿಯುನಲ್ಲಿ ಇರಿಸುವ ಅಗತ್ಯ ಕಂಡು ಬಂದರೆ ಆಗ ಮುಂದಿನ ನಿರ್ಧಾರ ಕೈಗೊಳ್ಳಲು ವೈದ್ಯರು ನಿರ್ಧರಿಸಿದ್ದಾರೆ.
Comments