ವಿಶ್ರಾಂತಿಗಾಗಿ ಸಿಂಗಪುರಕ್ಕೆ ಎಚ್ ಡಿ ಕೆ
ಲಂಡನ್‌ನಿಂದ ಬಂದಿದ ಮೂವರು ವೈದ್ಯರು ಮತ್ತು ಭಾರತದ ಐವರು ಹೃದ್ರೋಗ ತಜ್ಞರು ಜತೆಗೂಡಿ ಹೃದಯದಲ್ಲಿ ಅಳವಡಿಸಿದ್ದ ಮೆಟಲ್ ವಾಲ್ವ್ ಬ್ಲಾಕ್ ತೆಗೆದಿದ್ದು, ಬದಲಾಗಿ ಟಿಶ್ಯು ವಾಲ್ವ್ ಬದಲಾವಣೆ ಮಾಡಿದ್ದಾರೆ. ಇದರಿಂದ ಮುಂದಿನ 15 ವರ್ಷಗಳ ಕಾಲ ಯಾವುದೇ ತೊಂದರೆಯಾಗದು ಎಂದು ತಿಳಿದು ಬಂದಿದೆ….
ಶಸ್ತ್ರ ಚಿಕಿತ್ಸೆ ನಂತರ ಒಂದು ತಿಂಗಳ ಕಾಲ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದು ಸಿಂಗಪುರಕ್ಕೆ ವಿಶ್ರಾಂತಿಗಾಗಿ ತೆರಳುತ್ತಿದ್ದಾರೆ. ಈಗಾಗಲೇ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಹಾಗೂ ಆ ನಂತರ ಕಡ್ಡಾಯ ವಿಶ್ರಾಂತಿ ಜತೆಗೆ ಜೀವನಶೈಲಿಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆ ಬಗ್ಗೆ ಕುಮಾರಸ್ವಾಮಿಯವರಿಗೆ ತಿಳಿಸಿದ್ದಾರೆ. ಸಿಂಗಪುರದಿಂದ ಮರಳಿದ ನಂತರ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.
Comments