ಹೆಚ್ಡಿಕೆಗಾಗಿ ಜೆಡಿಎಸ್ ಮುಖಂಡರಿಂದ ನಾಳೆ ನಗರದ ಹಲವೆಡೆ ಪೂಜೆ
ಕುಮಾರಸ್ವಾಮಿ ಅವರಿಗೆ ಆರೋಗ್ಯ ಮತ್ತು ಆಯಸ್ಸು ವೃದ್ಧಿಸಲೆಂದು ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ನಾಳೆ ಬೆಳಗ್ಗೆ 108 ಕೊಡ ಹಾಲಿನ ಅಭಿಷೇಕ ಮಾಡಲು ಜೆಡಿಎಸ್ ಮುಖಂಡರು ನಿರ್ಧರಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ನೇತೃತ್ವದಲ್ಲಿ ನಾಳೆ ಬೆಳಗ್ಗೆ 6.30 ರಿಂದಲೇ ನಗರದ ಹಲವು ದೇವಸ್ಥಾನಗಳಲ್ಲಿ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಪೂಜಾ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅಭಿಮಾನಿಗಳು ಹಾಗೂ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಬೇಕೆಂದು ಟಿ.ಎ. ಶರವಣ ಮನವಿ ಮಾಡಿದ್ದಾರೆ. ತ್ಯಾಗರಾಜನಗರದಲ್ಲಿರುವ ಶನಿಮಹಾತ್ಮ ದೇವಸ್ಥಾನದಲ್ಲಿ ನಾಳೆ ಬೆಳಿಗ್ಗೆ 6.30 ಕ್ಕೆ ವಿಶೇಷ ಪೂಜೆ. ಅದೇ ರೀತಿ ಬೆಳಿಗ್ಗೆ 7 ಗಂಟೆಗೆ ಬಸವನಗುಡಿಯ ಕಾರಂಜಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ‍್ಳಲಾಗಿದೆ.
ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 7.30ಕ್ಕೆ ವಿಶೇಷ ಪೂಜೆ, ಮಹಾರುದ್ರಾಭಿಷೇಕ, ಗವಿಗಂಗಾಧರೇಶ್ವನಿಗೆ 108 ಕೊಡ ಹಾಲಿನ ಅಭಿಷೇಕ. 9 ಮಂದಿ ಪುರೋಹಿತರಿಂದ ಪೂಜೆ, ಮೃತ್ಯುಂಜಯ ಹೋಮ, ಗವಿಗಂಗಾಧರೇಶ್ವರದಲ್ಲಿ 10,008 ಮಹಾರುದ್ರ ಪಾರಾಯಣ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶರವಣ ತಿಳಿಸಿದ್ದಾರೆ.
Comments