ಕುಮಾರಣ್ಣ ನಿಂದ ನವರಾತ್ರಿಯ ಬಂಪರ್ ಗಿಫ್ಟ್

ಬೆಂಗಳೂರು: ಕೊನೆಗೂ 'ನಮ್ಮ ಟೈಗರ್' ಆಯಪ್ ಪ್ಲೇಸ್ಟೋರ್ ಗೆ ಬಂದಿದೆ. ಇದೇ ಸೆ.25 ಸೋಮವಾರದಿಂದ ಚಾಲಕರ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, 20 ದಿನಗಳಲ್ಲಿ ಕ್ಯಾಬ್ ಸೇವೆ ಆರಂಭವಾಗಲಿದೆ.
ಹಲವು ತಿಂಗಳ ಹಿಂದೆ ಓಲಾ ಮತ್ತು ಉಬರ್ ಕಂಪನಿಗಳ ವಿರುದ್ಧ ಪ್ರತಿಭಟನೆಗೆ ಇಳಿದಿದ್ದ ಕ್ಯಾಬ್ ಚಾಲಕರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕ್ಯಾಬ್ ಸೇವೆ ಆರಂಭಿಸುವ ಪಣತೊಟ್ಟಿದ್ದರು.
ಗುರುವಾರ ಕುಮಾರಸ್ವಾಮಿ ಅವರ ಜೆ.ಪಿ. ನಗರದ ನಿವಾಸದಲ್ಲಿ 'ನಮ್ಮ ಟೈಗರ್' ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲಾಯಿತು. ಟೈಗರ್ ಡ್ರೈವರ್ (Tygr Driver) ಹೆಸರಿನಲ್ಲಿ ಈ ಆಯಪ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಈ ಆಯಪ್ ಮೂಲಕ ಸೋಮವಾರದಿಂದ ಚಾಲಕರು ನೋಂದಣಿ ಮಾಡಿಕೊಳ್ಳಬಹುದು. 20 ದಿನಗಳ ಕಾಲ ಈ ಪ್ರಕ್ರಿಯೆ ನಡೆಯಲಿದೆ. 20 ದಿನಗಳಲ್ಲಿ 10 ಸಾವಿರ ಚಾಲಕರ ನೋಂದಣಿ ಗುರಿ ಹೊಂದಲಾಗಿದೆ.
ಚಾಲಕರ ನೋಂದಣಿ ಮುಗಿದ ನಂತರ ಗ್ರಾಹಕರಿಗೆ ಆಯಪ್ ಬಿಡುಗಡೆ ಮಾಡಲಾಗುತ್ತದೆ. ಆ ನಂತರ ಕ್ಯಾಬ್ ಸೇವೆ ಆರಂಭಗೊಳ್ಳಲಿದೆ.
Comments