ಅಪೋಲೊ ಆಸ್ಪತ್ರೆಗೆ ದಾಖಲಾದ ಎಚ್ ಡಿ ಕೆ ಗೆ ನಾಳೆ ಶಸ್ತ್ರ ಚಿಕಿತ್ಸೆ
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೃದಯದ ಶಸ್ತ್ರಚಿಕಿತ್ಸೆಗಾಗಿ ಗುರುವಾರ ಸಂಜೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕುಮಾರಸ್ವಾಮಿಗೆ ಹೃದಯ ಶಸ್ತ್ರಚಿಕಿತ್ಸೆ ಸೆ.23 ಶನಿವಾರ ಬೆಳಿಗ್ಗೆ ಲ್ಯಾಪ್ರೋಸ್ಕೋಪಿಕ್ ಕೀಹೋಲ್ ಪ್ರಕ್ರಿಯೆ ಮೂಲಕ ಟಿಶ್ಯೂವಾಲ್ವ್ ಬದಲಾವಣೆ ಮಾಡಲಾಗುವುದು. ಡಾ. ಸತ್ಯಕಿ ನೇತೃತ್ವದ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಲಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.
10 ವರ್ಷಗಳ ಹಿಂದೆ ಟಿಶ್ಯೂವಾಲ್ವ್ ಅಳವಡಿಸಲಾಗಿತ್ತು. ಇತ್ತೀಚೆಗೆ ದೂಳಿನ ಅಲರ್ಜಿ ಮತ್ತು ಕಫದ ಸಮಸ್ಯೆಯಿಂದ ಹೃದಯ ಕವಾಟದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಹಳೆಯ ವಾಲ್ವ್ ಕಾಲಾವಧಿ ಮುಗಿರುವುದರಿಂದ ಅದನ್ನು ಬದಲಿಸಲು ವೈದ್ಯರು ಸಲಹೆ ನೀಡಿದ್ದರು. ಚಿಕಿತ್ಸೆಯ ಬಳಿಕ ಸೆಪ್ಟಂಬರ್ 26 ರಂದು ಕುಮಾರಸ್ವಾಮಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಲಿದ್ದು, ಬಳಿಕ 2 ವಾರಗಳ ವಿಶ್ರಾಂತಿ ಪಡೆಯಲಿದ್ದಾರೆ.
Comments