ಕುಮಾರಣ್ಣನ ಕನ್ನಡ ಪ್ರೇಮವನ್ನೇ ಪ್ರಶ್ನಿಸಿದ ಬಿಜೆಪಿ ಭಕ್ತೆಗೆ ಹೆಚ್ಡಿಕೆ ಅಭಿಮಾನಿಯಿಂದ ತಿರುಗೇಟು.

ಕುಮಾರಣ್ಣನ ಕನ್ನಡತನವನ್ನೆ ಪ್ರಶ್ನೆ ಮಾಡಿದ ಭಕ್ತೆಗೆ ಉತ್ತರ.. ಕರ್ನಾಟಕದ ನೆಲ ಜಲ ಭಾಷೆ ವಿಚಾರ ಬಂದಾಗ ಮೊದಲು ಹೋರಾಟಕ್ಕೆ ಇಳಿಯೋದು ಕುಮಾರಣ್ಣನೊ ಇಲ್ಲ ನಿನ್ನೆ ಮಾತಾಡಿರೊ ಬಿಂಕದ ರಾಣಿಯೊ?
ಕಾವೇರಿ ನೀರಿನ ಸಮಸ್ಯೆ ಎದುರಾದಾಗ ಬೀದಿಗಿಳಿದು ಹೋರಾಟ ಮಾಡಿದ್ದು ನಮ್ಮ ಕುಮಾರಣ್ಣ ಹಾಗೂ ಕುಮಾರಣ್ಣನ ಅಭಿಮಾನಿಗಳು, ಕರ್ನಾಟಕದ ಕುಲಕೋಟಿ ಕನ್ನಡಿಗರು, ಕನ್ನಡಪರ ಸಂಘಟನೆಗಳು, ಹೋರಾಟ ಮಾಡೋಕೆ ಮೋದಿನೂ ಬಂದಿಲ್ಲ, ಶಾ ನೂ ಬಂದಿಲ್ಲ ಯಾರೊ ನಿನ್ನೆ ಹೇಳಿದಾಳಲ್ಲ ಅವಳು ಬಂದಿಲ್ಲ...
ಇತ್ತೀಚೆಗೆ ಅಂಗನವಾಡಿಯಲ್ಲಿ ಕೆಲಸ ಮಾಡುವ ಮಹಿಳೆಯರು ಧರಣಿ ಮಾಡಿದಾಗ ಅವರ ಬೆಂಬಲಕ್ಕೆ ನಿಂತಿದ್ದು ಯಾರು ನಮ್ಮ ಕುಮಾರಣ್ಣ.. ಆಶಾ ಕಾರ್ಯಕರ್ತೆಯರು ಹೋರಾಟ ಮಾಡುವಾಗ ಅವರಿಗೆ ಬೆಂಬಲ ನೀಡಿದ್ದು ಯಾರು ನಮ್ಮ ಕುಮಾರಣ್ಣ ..
ಇದೆ ಕೆ ಪಿ ಎಸ್ ಸಿ ಯ ಕರ್ಮಕಾಂಡದಿಂದಾಗಿ ಸಾವಿರಾರು ಕನ್ನಡ ಐ.ಎ.ಎಸ್ ಮತ್ತು ಐ.ಪಿ.ಎಸ್ ಪರೀಕ್ಷಾರ್ಥಿಗಳ ಭವಿಷ್ಯ ಬೀದಿಗೆ ಬಂದಾಗ ಅವರ ಬೆಂಬಲಕ್ಕೆ ನಿಂತಿದ್ದು ಯಾರು ನಮ್ಮ ಕುಮಾರಣ್ಣ...
ಮಹಾದಾಯಿ ಸಮಸ್ಯೆ ಎದುರಾದಾಗ ಕಾಂಗ್ರೆಸ್ ಸರ್ಕಾರ ರೈತರ ಮೇಲೆ ಲಾಠಿ ಚಾರ್ಜ್ ಮಾಡ್ಸಿದ್ರೂ ಆಗ ಮೋದಿ,ಶಾ ಹಾಗೂ ರಾಜ್ಯ ಬಿಜೆಪಿ ನಾಯಕರು ಮನೆಯಲ್ಲಿ ಅವಿತು ಕೂತಿದ್ರೂ ಆಗ ಗ್ರಾಮಕ್ಕೆ ಭೇಟಿ ಕೊಟ್ಟು ಮಹಿಳೆಯರಿಗೆ ಧೈರ್ಯ ಹೇಳಿ ಬೆಂಬಲ ನೀಡಿ ರಾಜ್ಯ ಸರ್ಕಾರಕ್ಕೆ ರೈತರ ಮೇಲಿನ ಕೇಸ್ ವಾಪಸ್ ಪಡೆಯುವಂತೆ ಆಗ್ರಹ ಮಾಡಿದ್ದು ಯಾರು ನಮ್ಮ ಕುಮಾರಣ್ಣ...
ಸಾವಿರಾರು ಜನರು ಕಷ್ಟ ಎಂದು ಅವರ ಮನೆ ಬಾಗಿಲಿಗೆ ಹೋದಾಗ ಅವರ ಕಷ್ಟಕ್ಕೆ ಸ್ಪಂದಿಸಿದ್ದು ಕುಮಾರಣ್ಣನೊ ಅಥವಾ ನಿನ್ನೆ ನಾಲಿಗೆಗೆ ಮುಳ್ಳಿಲ್ಲ ಎಂದು ಸೊಕ್ಕಿನ ಮಾತಾಡಿದ ಅವಳೊ...
ರಾಜ್ಯದ ರೈತರು ಸಂಕಷ್ಟದಲ್ಲಿದ್ದಾಗ ಕಳೆದ ನಾಲ್ಕೈದು ವರ್ಷಗಳಿಂದ ಸರಿಸುಮಾರು 1500 ಹೆಚ್ಚು ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಐವತ್ತು ಸಾವಿರ ಪರಿಹಾರ ನೀಡಿದ್ದು ಯಾರು ನಮ್ಮ ಕುಮಾರಣ್ಣ...
ಜಾಗ್ವಾರ್ ಸಿನಿಮಾ ಬಗ್ಗೆ ಮಾತಾಡಿದ್ದೆ ಅಲ್ವಾ, ಇದೇ ಜಾಗ್ವಾರ್ ಸಿನಿಮಾ ಧ್ವನಿಸುರುಳಿ ಬಿಡುಗಡೆ ಸಂದರ್ಭದಲ್ಲಿ ಸೇನೆಯಲ್ಲಿ ಪ್ರಾಣತ್ಯಾಗ ಮಾಡಿದ ಸೈನಿಕರ ಕುಟುಂಬಗಳಿಗೆ
ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಸಹಾಯಧನ ನೀಡಿದ್ದು ಯಾರು ನಮ್ಮ ಕುಮಾರಣ್ಣ...
ಇಷ್ಟೆಲ್ಲಾ ಮಾಡಿದ್ದು ಕನ್ನಡಿಗರಿಗಾಗಿಯೇ, ಕನ್ನಡತನ ಇರುವುದಕ್ಕೆ, ಕನ್ನಡಪ್ರೇಮ ಇರುವುದಕ್ಕೆ, ಕೇವಲ ನಾಲ್ಕು ಸಿನಿಮಾದಲ್ಲಿ ಕನ್ನಡ ನಟಿಯರನ್ನು ಹಾಕಿದ ಮಾತ್ರಕ್ಕೆ ಅದು ಕನ್ನಡ ಪ್ರೇಮ ಅಲ್ಲ...
ಕರ್ನಾಟಕದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅವರಿಗೆ ತನ್ನ ಕೈಲಾದ ಸಹಾಯ ಬೆಂಬಲ ನೀಡುತ್ತಾ ಕೊಡುಗೈ ದಾನಿಯಾಗಿ ನೊಂದವರಿಗೆ ಆಸರೆಯಾಗಿ ಕನ್ನಡದ ನೆಲ,ಜಲ,ಭಾಷೆ ಉಳಿಸುವ ಪ್ರಯತ್ನ ಮಾಡಿದಾರಲ್ಲ ನಮ್ಮ ಕುಮಾರಣ್ಣ ಅದು ನಿಜವಾದ ಕನ್ನಡ ಪ್ರೇಮ,ಕನ್ನಡತನ ಅದು ಹೆಮ್ಮೆಯ ಕನ್ನಡಿಗನ ಗತ್ತು,ತಾಕತ್ತು. ಅವಳ ಪರಿಚಯ ತಮಗಾರಿಗಾದರೂ ಇದ್ದರೆ ಈ ಮಾಹಿತಿ ಅವಳಿಗೆ ತಲುಪಿಸಿ..
Comments