ಗೌಡರ ಕುಟುಂಬದ ಸದಸ್ಯರು ಯಾವ ಕ್ಷೇತ್ರದಿಂದ ಎಲ್ಲೆಲ್ಲಿ ಸ್ಪರ್ಧಿಸಲಿದ್ದಾರೆ?
ಗೌಡರ ಕುಟುಂಬದ ಸದಸ್ಯರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದರ ರೋಚಕ ಮಾಹಿತಿ ಇಲ್ಲಿದೆ ನೋಡಿ. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಈ ಬಾರಿ ಎರಡು ಕ್ಷೇತ್ರಗಳಿಂದ ಚುನಾವಣೆಗೆ ಸ್ಫರ್ಧಿಸಲಿದ್ದಾರೆ. ರಾಮನಗರ ಹಾಗೂ ದೇವರ ಹಿಪ್ಪರಗಿ (ವಿಜಯಪುರ ಜಿಲ್ಲೆ) ವಿಧಾನಸಭಾ ಕ್ಷೇತ್ರಗಳಿಂದ ಅವರು ಪೈಪೋಟಿ ನಡೆಸುವ ಸಾಧ್ಯತೆಗಳಿವೆ.
ಅನಿತಾ ಕುಮಾರ ಸ್ವಾಮಿ ಅವರು, ಚನ್ನಪಟ್ಟಣ ತಾಲ್ಲೂಕಿನಿಂದ ಸ್ಫರ್ಧಿಸಲಿದ್ದಾರೆ. ಕಳೆದ ಬಾರಿ ಅವರು ಇದೇ ಕ್ಷೇತ್ರದಿಂದ ಸ್ಫರ್ಧಿಸಿದ್ದರು. ಆದರೆ, ಅವರು ಜಯಿಸಿರಲಿಲ್ಲ. ಮಾಜಿ ಸಚಿವ, ಹಾಲಿ ಕಾಂಗ್ರೆಸ್ ನಾಯಕ ಸಿ.ಪಿ. ಯೋಗೇಶ್ವರ್ ಅವರು ಇಲ್ಲಿ ವಿಜೇತರಾಗಿದ್ದರು.
ಎಚ್.ಡಿ. ರೇವಣ್ಣ ಅವರು ತಮ್ಮ ಸ್ವಕ್ಷೇತ್ರವಾದ ಹೊಳೆನರಸೀಪುರದಿಂದಲೇ ಕಣಕ್ಕಿಳಿಯಲಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಈ ಕ್ಷೇತ್ರ ಜೆಡಿಎಸ್ ನ ಭದ್ರಕೋಟೆ ಆಗಿರುವುದರಿಂದ ಈ ಬಾರಿ ಅವರು ಅಲ್ಲಿಂದಲೇ ಸ್ಪರ್ಧಿಸುವುದಾಗಿ ಖಚಿತ ಪಡಿಸಿದ್ದಾರೆ .
ಇನ್ನು, ರೇವಣ್ಣ ಅವರ ಧರ್ಮಪತ್ನಿ ಭವಾನಿ ರೇವಣ್ಣ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಲು ಸಜ್ಜಾಗಿದ್ದು, ಅವರು ಬೇಲೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ ನಿರ್ಧರಿಸಿದೆ ಎನ್ನಲಾಗಿದೆ. ಕಳೆದ ವರ್ಷ ಹಾಸನ ಜಿಲ್ಲಾ ಪಂಚಾಯ್ತಿಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಭವಾನಿ ರೇವಣ್ಣ ಅದೇ ವರ್ಚಸ್ಸಿನ ಮೇಲೆ ಈಗ ವಿಧಾನಸಭೆ ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ.
ಜೆಡಿಎಸ್ ನ ವಿಧೇಯ ಕಟ್ಟಾ ಬೆಂಬಲಿಗರಾದ ಜಿ.ಎಸ್. ಪುಟ್ಟರಾಜು ಅವರು ಮೇಲುಕೋಟೆಯಿಂದ, ಪ್ರೊ. ಕೆ.ಎಸ್. ರಂಗಪ್ಪ ಅವರು ಚಾಮರಾಜ ನಗರ, ಎಚ್. ವಿಶ್ವನಾಥ್ ಹುಣಸೂರು, ಶಶಿಭೂಷಣ್ ಹೆಗ್ಡೆ ಶಿರಸಿ, ಎ.ಟಿ. ರಂಗಸ್ವಾಮಿ ಅಕಲಗೂಡು, ಲೋಕೇಶ್ವರ ಅವರು ತಿಪಟೂರಿನಿಂದ ಕಣಕ್ಕಿಳಿಯಲಿದ್ದಾರೆ.
Comments