ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ಹೆಚ್ಡಿಕೆ ಹೇಳಿದ್ದೇನು!?
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳ ಹಿಂದೆ ವಾಲ್ವ್ ರೀಪ್ಲೇಸ್ಮೆಂಟ್ ಆಗಿತ್ತು. ಆಗ ನಡೆದಿದ್ದ ಆಪರೇಷನ್ನಲ್ಲಿ ಟಿಸ್ಯೂ ವಾಲ್ವ್ ರೀಪ್ಲೇಸ್ಮೆಂಟ್ ಮಾಡಲಾಗಿತ್ತು. ಈಗ ಎರಡನೇ ಆಪರೇಷನ್ ಇದೇ 23 ರಂದು ನಡೆಯಲಿದೆ ಎಂದು ತಿಳಿಸಿದರು.
ಇಸ್ರೇಲ್ ಡಾಕ್ಟರ್ ಹಾಗೂ ಅಮೇರಿಕಾದ ಡಾಕ್ಟರ್‌ಗಳ ಜೊತೆ ಇಲ್ಲಿನ ಡಾಕ್ಟರ್‌ಗಳು ಚರ್ಚೆ ನಡೆಸಿದ್ದಾರೆ. ಯಾವ ಟೆಕ್ನಿಕ್ ಯೂಸ್ ಮಾಡಿ ಆಪರೇಷನ್ ಮಾಡಬೇಕು ಅಂತಾ ಚರ್ಚೆ ನಡೆದಿದೆ. ಕಳೆದ 7-8 ತಿಂಗಳಿನಿಂದ ಕೆಮ್ಮಿನ ಸಮಸ್ಯೆಯಾಗಿದ್ದು, ಅದರ ಒತ್ತಡ ಹೃದಯದ ಮೇಲೂ ಆಗಿದೆ ಎಂದು ಅವರು ಹೇಳಿದರು.
ನಾನು ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವುದರಿಂದ ನನ್ನ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ಅವರು ವಿನಂತಿಸಿಕೊಂಡರು.
ಆಪರೇಷನ್ ಬಳಿಕ 15 ದಿನ ರೆಸ್ಟ್ ಬೇಕಾಗುತ್ತದೆ. ಅದಾದ ಬಳಿಕ ದಿನಕ್ಕೆ 20 ಗಂಟೆ ಹಿಂದಿನಂತೆಯೇ ಕೆಲಸ ಪ್ರಾರಂಭ ಮಾಡ್ತೇನೆ. ನನ್ನ ಬಗ್ಗೆ ಯಾವುದೇ ವದಂತಿ ಅಥವಾ ಉಹಾಪೋಹಗಳಿಗೆ ಕಿವಿ ಕೊಡಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ.
Comments