ಉಪ್ಪಿ ಪ್ರಜಾಕೀಯದ ಐಡಿಯಾಲಜಿಗೆ ಅಭಿಮಾನಿಗಳಿಂದ ಪ್ರತಿಕ್ರಿಯೆ
ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ ಕೊಟ್ಟ ನಂತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಒಂದಲ್ಲ ಒಂದು ರೀತಿಯಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಜನಸಮಾನ್ಯರ ಬಳಿಯಿರುವ ಹೊಸ ಪ್ಲಾನ್ ಗಳನ್ನು ತಮ್ಮದೊಂದಿಗೆ ಹಂಚಿಕೊಳ್ಳುವಂತೆ ಸೂಚಿಸಿದ್ದರು. ಸಲಹೆ ಸೂಚನೆಗಳನ್ನು ಪಡೆಯುವದಕ್ಕಾಗಿ ಉಪೇಂದ್ರ ಹೊಸ ಮೇಲ್ ಐಡಿಗಳನ್ನು ಸಹ ಕೊಟ್ಟಿದ್ದಾರೆ. ಇದೀಗ ಉಪ್ಪಿ ಅಭಿಮಾನಿಗಳಿಂದ ಸಲಹೆಯ ಮಹಾ ಪೂರವೆ ಬಂದಿದೆ. ಉಪೇಂದ್ರ ತಮಗೆ ಅಭಿಮಾನಿಗಳು ಕಳುಹಿಸಿರುವ ಸಲಹೆಯ ಎರಡು ಪತ್ರಗಳನ್ನು ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.
ಮೊದಲನೇಯ ಪತ್ರ : ರಾಜ್ಯದಲ್ಲಿ ಒಟ್ಟು 30 ಜಿಲ್ಲೆಗಳಿವೆ. ಹಾಗಾಗಿ ಸರ್ಕಾರ ಪ್ರತಿಯೊಂದು ಜಿಲ್ಲೆಗೂ ಹೊಸ ಕಟ್ಟಡವನ್ನು ಕಟ್ಟುವ ಮೂಲಕ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ತೆರೆಯುವುದು. 30 ಜಿಲ್ಲೆಗಳಲ್ಲಿ 30 ಆಸ್ಪತ್ರೆಯನ್ನು ಆರಂಭಿಸಿದ ಮೇಲೆ ಅವುಗಳನ್ನು ನಿರ್ವಹಣೆ ಮಾಡಲು ಸಾಕಷ್ಟು ಹಣ ಬೇಕು ಅದಕ್ಕಾಗಿ ನಮ್ಮ ರಾಜ್ಯದಲ್ಲಿ ಅಂದಾಜು 5 ಕೋಟಿ ಜನರು ಮೊಬೈಲ್ ಬಳಕೆದಾರರು ನಮಗೆ ಸಿಗುತ್ತಾರೆ. ಪ್ರತಿಯೊಬ್ಬರಿಂದ ದಿನಕ್ಕೆ 1 ರೂ.ಯಂತೆ ತಿಂಗಳಿಗೆ 30 ರೂ. ಸಂಗ್ರಹಣೆ ಮಾಡಿದರೆ ತಿಂಗಳಿಗೆ 150 ಕೋಟಿ ರೂ. ಸಂಗ್ರಹಣೆ ಆಗುತ್ತದೆ. 5 ಕೋಟಿ ರೂ.ನಂತೆ ಭಾಗ ಮಾಡಿ ಎಲ್ಲ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗಳಿಗೆ ನೀಡಿದರೆ ನಿರ್ವಹಣಾ ವೆಚ್ಚವನ್ನು ಸುಲಭವಾಗಿ ಭರಿಸಬಹುದು. ಇದರಿಂದ ಯಾವುದೇ ಬಡವರು ಯಾವ ಕಾಯಿಲೆಗೆ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತದೆ.
ಎರಡನೆಯ ಪತ್ರ :
ಒಂದೇ ದೇಶ, ಒಂದೇ ಟ್ಯಾಕ್ಸ್ ಇರುವಂತೆ ರಾಜ್ಯದಲ್ಲಿ `ಒಂದೇ ದೇಹ, ಒಂದೇ ಇನ್ ಶ್ಯೂರನ್ಸ್’ ಜಾರಿಗೆ ತರಬೇಕು.
ಪ್ರತಿ ದೇಹಕ್ಕೂ ಒಂದಲ್ಲಾ ಒಂದು ರೋಗ ಬರುತ್ತದೆ. ಹೀಗಾಗಿ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಹೆಲ್ತ್ ಇನ್‍ಶ್ಯೂರೆನ್ಸ್ ಮಾಡಿಸಬೇಕು. ಈಗಿರುವ ಪಾಲಿಸಿಗಳು ಕೇವಲ ಕೆಲವು ರೋಗಗಳನ್ನು ಸರಿ ಮಾಡುತ್ತವೆ. ಮನುಷ್ಯರಾದ ಮೇಲೆ ಎಲ್ಲರಿಗೂ ಎಲ್ಲ ರೋಗ ರುಜಿನುಗಳು ಬರುತ್ತವೆ. ಆದ್ದರಿಂದ ಒಂದೇ ದೇಹ, ಒಂದೇ ಇನ್ ಶ್ಯೂರೆನ್ಸ್ ಜಾರಿಯಾಗಬೇಕು ಎಂದು ಅಭಿಮಾನಿ ಹೇಳಿದ್ದಾರೆ.
ಒಟ್ಟಿನಲ್ಲಿ ಉಪೇಂದ್ರ ಕನಸಿನ ರಾಜಕೀಯ ಜೀವನಕ್ಕೆ ಅಭಿಮಾನಿಗಳು ಮತ್ತು ಜನಸಾಮನ್ಯರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಪ್ರಜಾಕೀಯದ ಮೂಲಕ ಉಪೇಂದ್ರ ಜನಸಾಮನ್ಯರ ಜೀವನದಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ತರಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
Comments