ಎ ಮಂಜು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರೋದು ಕನ್ಫರ್ಮ್ , ಬಾಲಕೃಷ್ಣಗೆ ನಡುಕ ಶುರು
ರಾಮನಗರದ ಜಿಲ್ಲಾ ಪಂಚಾಯತಿ ಸದಸ್ಯರಾದ ಎ ಮಂಜುರವರು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷವನ್ನು ಸೇರುವುದಾಗಿ ತಿಳಿಸಿದರು.ಮಾಗಡಿ ಕ್ಷೇತ್ರದ ಶಾಸಕರದ ಬಾಲಕೃಷ್ಣ ಸಂಗಡಿಗರು ಎಮ್ಎಲ್ಸಿ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದಾಗ ಜೆಡಿಎಸ್ನ ರಾಷ್ಟ್ರಾಧ್ಯಕ್ಷರು ದೂರವಾಣಿ ಮೂಲಕ ಮಾತನಾಡಿ ನಿನ್ನ ಬಗ್ಗೆ ತಿಳಿದಿರುವೆ...
ನೀನು ನಮ್ಮ ಪಕ್ಷಕ್ಕೆ ಬಂದರೆ ನಮ್ಮ ಪಕ್ಷದ ನಾಯಕರಾಗಿ ಶಾಸಕರಗಿ ಮಾಡುವುದಾಗಿ ಹೇಳಿದರು ನಾನು ಕೂಡಾ ದೀರ್ಘವಾಗಿ ಆಲೋಚಿಸಿ ಸಂಸದರ ಜೋತೆಯಲ್ಲು ಚರ್ಚಿಸಿ ನಿರ್ಧರಿಸಿದ್ದೇನೆಂದರು .
ಪಕ್ಷ ಸೇರ್ಪಡೆ ಯಾವಾಗ ಎಂದು ಕೇಳಿದಾಗ, ಎಚ್ ಡಿ ದೇವೇಗೌಡರು ಒಳ್ಳೆಯ ಸಮಯದಲ್ಲಿ ಸೇರ್ಪಡೆಗೆ ಸೂಚಿಸಿದ ನಂತರ ಸೇರ್ಪಡೆಯಾಗುವುದಾಗಿ ತಿಳಿಸಿದರು. ಜೆಡಿಎಸ್ ಪಕ್ಷದ ಕಾರ್ಯಕರ್ತರು ನಿಮ್ಮನ್ನು ಒಪ್ಪಿಕೊಳ್ಳುವರೇ ಎಂದು ಕೇಳಿದಾಗ ನಾವು ರಾಜಕೀಯ ಮಾಡುವಾಗ ದ್ವೇಷವನ್ನು ಕಿರುಕುಳ ದೌರ್ಜನ್ಯ ಹಿಂಸೆಯನ್ನು ನಾವು ರಾಜಕಾರಣದಲ್ಲಿ ಮಾಡಿಲ್ಲದಿರುವುದರಿಂದ ನಮ್ಮ ಒಪ್ಪಿಕೊಂಡಿದ್ದಾರೆ.
ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಕಾರ್ಯಕರ್ತರು ವರಿಷ್ಠರ ವಿರುದ್ಧ ತೊಡೆ ತಟ್ಟಲಿದ್ದಾರೆ ಎಂಬ ನಂಬಿಕೆ ನನ್ನಲಿದೆ. ನಾನು ನ್ಯಾಯ ಕೇಳಬೇಕು ಮಾಗಡಿ ಕ್ಷೇತ್ರದ ಜನತಾ ನ್ಯಾಯಾಲಯದಲ್ಲಿ ಜನರ ನ್ಯಾಯವನ್ನು ಕೋಡುತ್ತಾರೆಂಬ ಅಚಲವಾದ ನಂಬಿಕೆಯಿದೆ ಎಂದು ಹೇಳಿದರು.
Comments