ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಉನ್ನತ ಸ್ಥಾನಗಳನ್ನು ಗಳಿಸಲು ಕಾರಣ ದೇವೇಗೌಡರಂತೇ

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, 'ದೇವೇಗೌಡರು ನನ್ನ ನಾಯಕರು. ಯಾವುದೇ ಸಂದರ್ಭದಲ್ಲೂ ನಮ್ಮತನವನ್ನು ಗಟ್ಟಿಯಾಗಿ ಉಳಿಸಿಕೊಂಡು ನಡೆಸುವಲ್ಲಿ ಈ ಹಿಂದೆ ಕೆಲವು ಲೋಪಗಳಾಗಿದ್ದು, ಅದನ್ನು ಒಪ್ಪಿಕೊಳ್ಳುತ್ತೇನೆ ಇನ್ನು ಮುಂದೆ ಆ ರೀತಿ ಆಗದಂತೆ ಮುನ್ನೆಚ್ಚರಿಕೆಯಿಂದ ಮುಂದುವರಿಯುತ್ತೇನೆ' ಎಂದು ಹೇಳಿದರು…..
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.36ರಷ್ಟು ಒಕ್ಕಲಿಗರಿದ್ದು, ಗೆಲುವಿಗೆ ನಿರ್ಣಾಯಕರೆನಿಸಿದ್ದಾರೆ. ಆ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾದಾಗ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿದಾಗ ಹೆಸರಿನೊಂದಿಗೆ ಗೌಡ ಎಂಬುದನ್ನು ಸೇರಿಸಿಕೊಂಡರೆ ಉಪಯುಕ್ತವಾಗಲಿದೆ ಎಂದು ದೇವೇಗೌಡರು ಸಲಹೆ ನೀಡಿದರು. ಅಲ್ಲಿಯವರೆಗೆ ಸದಾನಂದನಾಗಿದ್ದ ನಾನು ಸದಾನಂದ ಗೌಡನಾದೆ. ಈ ಗೌಡ ಹೆಸರಿನ ಏಣಿಯ ಮೂಲಕ ಈವರೆಗೆ ನಾನಾ ಉನ್ನತ ಸ್ಥಾನಗಳನ್ನು ಪಡೆದಿದ್ದೇನೆ ಎಂದು ಹೇಳಿದ್ದಾರೆ .
Comments