ನೆನ್ನೆ ಉದ್ಘಾಟನೆಗೊಂಡ ನರ್ಮದಾ ಡ್ಯಾಮ್ ,ಜಗತ್ತಿನ 2ನೇ ಅತಿ ಎತ್ತರದ ಡ್ಯಾಮ್ ಅಗಿದು ದೇವೇಗೌಡರಿಂದಲೇ !!

ಪ್ರಧಾನ ಮಂತ್ರಿ ಮೋದಿ ಅವರು ಉದ್ಘಾಟನೆ ಮಾಡಿದ ಸರ್ದಾರ್ ಸರೋವರ್ ಡ್ಯಾಮ್ ನ ಯೋಜನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿರುವುದು 1996ರಲ್ಲಿ ಪ್ರಧಾನಿಯಾಗಿದ್ದ ಕರ್ನಾಟಕದ ಹೆಚ್.ಡಿ. ದೇವೇಗೌಡ.1961ರಲ್ಲಿ ಶುರುವಾಗಿದ್ದ ಸರ್ದಾರ್ ಸರೋವರ ಡ್ಯಾಮ್ ಯೋಜನೆ 1971ರಲ್ಲಿ ಮೇಧಾ ಪಾಟ್ಕರ್ ಅವರು ಶುರು ಮಾಡಿದ ಚಳುವಳಿಗೆ ಬಲಿಯಾಗಿ ನೆನೆಗುದಿಗೆ ಬಿದ್ದಿತ್ತು. ಆಗ ಇದು ಇಷ್ಟೊಂದು ದೊಡ್ಡ ಗಾತ್ರದ ಯೋಜನೆ ಆಗಿರಲಿಲ್ಲ…
1996ರ ವರೆಗೆ ಸತತ 25 ವರ್ಷಗಳ ಕಾಲ ಯಾವ ಪ್ರಧಾನಿಯೂ ಮಾಡಲಾಗದಂತಹ ಕಾರ್ಯವೊಂದನ್ನು ಕನ್ನಡಿಗ ಪ್ರಧಾನಿ ಹೆಚ್.ಡಿ. ದೇವೇಗೌಡರು ಮಾಡಿ ಇಡೀ ವಿಶ್ವಕ್ಕೇ ಅಚ್ಚರಿ ಮೂಡಿಸಿದ್ದರು.ತಮ್ಮ ಜನರು ವಸತಿ ವಂಚಿತರಾಗುತ್ತಾರೆ ಎಂದು ಈ ಯೋಜನೆ ವಿರುದ್ಧ ಹೋರಾಟ ಮಾಡುತ್ತಿದ್ದ ಮೇಧಾ ಪಾಟ್ಕರ್ ಹಾಗೂ ತಮ್ಮ ಜನಕ್ಕೆ ಸಿಗುವ ನೀರು ಕಡಿಮೆ ಆಗುವುದೆಂದು ಇದರ ವಿರುದ್ಧ ಹೋರಾಟ ಮಾಡುತ್ತಿದ್ದ ಮಧ್ಯ ಪ್ರದೇಶದ ಆಗಿನ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರ ನಡುವೆ ಸಂಧಾನ ಮಾಡಿ ಗುಜರಾತಿನ ರೈತರ ಹಿತದೃಷ್ಟಿಯಿಂದ ಡ್ಯಾಮ್ ಎತ್ತರ 455 ಅಡಿ ಗೆ ಏರಿಸಲು ಅನುಮೋದನೆ ನೀಡಿದರು.
ರೈತಪರ ನೀರಾವರಿ ಹೋರಾಟಗಳ ಹಿನ್ನೆಲೆಯಿಂದ ಬಂದಿದ್ದ ದೇವೇಗೌಡರು, ಈ ಡ್ಯಾಮ್ ನ ಎತ್ತರದ ಮಟ್ಟವನ್ನು ಏರಿಸಲು ಅದೇಶಿಸಿ ಇಡೀ ವಿಶ್ವದಲ್ಲೇ 2ನೇ ಅತಿ ಎತ್ತರದ ಡ್ಯಾಮ್ ಆಗುವಂತೆ ನೋಡಿಕೊಂಡರು. ಈ ಯೋಜನೆಗಿದ್ದ ಎಲ್ಲಾ ಅಡೆತಡೆಗಳನ್ನು ಮಾತುಕತೆಯಿಂದ ಬಗೆಹರಿಸಿದರು. ಇದರಿಂದ ಇನ್ನೂ ಲಕ್ಷಾಂತರ ರೈತರ ಜೀವನ ಸುಖಿಮಯವಾಗುವಂತಾಯಿತು.
Comments