ದೇವೇಗೌಡರ ಹೇಳಿಕೆಯನ್ನು ತಿರುಚಿ, ಸುಳ್ಳು ವರದಿ ಮಾಡಿರುವ ಮಾಧ್ಯಮಗಳು

16 Sep 2017 5:20 PM |
3305 Report

ಮಾಧ್ಯಮಗಳು ಜನರ ಪ್ರತಿನಿಧಿಗಳಿದ್ದಂತೆ ಇಂತಹ ಮಾಧ್ಯಮಗಳು ಸುಳ್ಳುಗಳಿಂದ ಒಬ್ಬ ಮಹಾನ್ ಸಾಧಕನನ್ನು ಹೇಗೆ ಮುಗಿಸಿಬಿಡಬಹುದು ಎಂಬುದನ್ನು ಕೆಲ ಮಾಧ್ಯಮಗಳಿಂದ ಕಲಿಯಬೇಕು. ಶಹಾಪುರದಲ್ಲಿ ನಿನ್ನೆ ನಡೆದ ಜೆಡಿಎಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಹೆಚ್.ಡಿ. ದೇವೇಗೌಡರು, ಸಮಾಜದಲ್ಲಿ ಹಿಂದು-ಮುಸ್ಲಿಂ-ಕ್ರೈಸ್ತರೆಲ್ಲರೂ ಒಗ್ಗಟ್ಟಾಗಿ ಬಾಳುವಂತೆ ಮಾಡುತ್ತೇನೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಆದೆರೆ ಕೆಲವು ಮಾಧ್ಯಮಗಳು ಈ ಹೇಳಿಕೆಗೆ ಹೊಸ ತಿರುವು ನೀಡಿ, ದೇವೇಗೌಡರು ಹಿಂದೂ ರಾಜ್ಯ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ – ಎಂಬ ಸುಳ್ಳು ಸುದ್ದಿ ವರದಿ ಮಾಡಿದ್ದಾರೆ.

ಆದೆರೆ ಕೆಲವು ಮಾಧ್ಯಮಗಳು ಈ ಹೇಳಿಕೆಗೆ ಹೊಸ ತಿರುವು ನೀಡಿ, ದೇವೇಗೌಡರು ಹಿಂದೂ ರಾಜ್ಯ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ – ಎಂಬ ಸುಳ್ಳು ಸುದ್ದಿ ವರದಿ ಮಾಡಿದ್ದಾರೆ. ಬಿಜೆಪಿ-ಕಾಂಗ್ರೆಸ್ ರಾಷ್ಟೀಯ ಪಕ್ಷಗಳ ಗುಲಾಮಗಿರಿ ಗೋಜಿಗೆ ಬಿದ್ದಿರುವ ಕೆಲವು ಮಾಧ್ಯಮಗಳು ಅವರು ಬಿಸಾಡುವ ಎಂಜಲು ಕಾಸಿಗೆ ಕೈಯೊಡ್ಡಿ ಇಂತಹ ಹೀನ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ.  ಕಾವೇರಿ-ಕೃಷ್ಣಾ ನದಿ ಇಂದಿಗೂ ಕರ್ನಾಟಕದಲ್ಲಿ ಹರಿಯುತ್ತಾ ಲಕ್ಷಾಂತರ ಜನರಿಗೆ ನೀರು ಒದಗಿಸುತ್ತಿದೆ ಎಂದರೆ, ಅದಕ್ಕೆ ದೇವೇಗೌಡರೇ ಕಾರಣ. ಕರ್ನಾಟಕಕ್ಕೋಸ್ಕರ 50 ವರ್ಷಗಳ ಸುಧೀರ್ಘ ಹೋರಾಟದಲ್ಲಿ ದೇವೇಗೌಡರು ಅಧಿಕಾರ ಅನುಭವಿಸಿದ್ದು ಬರೀ 28 ತಿಂಗಳು ಮಾತ್ರ! ಇದಕ್ಕೆಲ್ಲಾ ಕಾರಣ ಸತ್ಯವಿಪರ್ಯಾಸಗೊಳಿಸುವ ಕೆಲ ಬರಹಗಾರರು. ಇದು ನಮ್ಮ ರಾಜ್ಯಕ್ಕೆ ಆಗುತ್ತಿರುವ ಬಹುದೊಡ್ಡ ನಷ್ಟ. ಇಂತಹ ಹೀನಾಯ ಕೆಲಸದಿಂದ ಕೆಲವು ಕೀಳು ಮಾಧ್ಯಮಗಳಿಗೆನು ಸಿಗುತ್ತದೋ ಏನೋ ಗೊತ್ತಿಲ್ಲ. ಆದರೆ, ನಮ್ಮ ಇಡೀ ಕರ್ನಾಟಕ ರಾಜ್ಯಕ್ಕಂತೂ ಬಹಳ ನಷ್ಟವಾಗುತ್ತಿದೆ.

Edited By

jds admin

Reported By

jds admin

Comments