ರೈತರ ಬಗ್ಗೆ ಕಾಳಜಿ ಹೊಂದಿರುವ ಗೌಡರ ಪುಸ್ತಕ ಬಿಡುಗಡೆಯಾಗಲಿದೆ

16 Sep 2017 1:26 PM |
2343 Report

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಕುರಿತ ಜೀವನ ಚರಿತ್ರೆ ಪುಸ್ತಕ ನವೆಂಬರ್ ತಿಂಗಳೊಳಗಾಗಿ ಬಿಡುಗಡೆಗೊಳ್ಳಲಿದೆ ಎಂದು ಕಡೂರು ಕ್ಷೇತ್ರ ಶಾಸಕ ಹಾಗೂ ಪುಸ್ತಕದ ಲೇಖಕ ವೈ.ಎಸ್.ವಿ. ದತ್ತಾ ಹೇಳಿದರು

ಶಿವಮೊಗ್ಗ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1973ರಿಂದಲೂ ಜನತಾ ಪರಿವಾರದಲ್ಲಿ ಹಾಗೂ ದೇವೇಗೌಡರ ಅನುಯಾಯಿಯಾಗಿ, ಬೆಂಬಲಿಗನಾಗಿ, ಒಡನಾಡಿಯಾಗಿ ರಾಜಕೀಯ ಜೀವನ ನಡೆಸುತ್ತಿದ್ದೇನೆ. ದೇವೇಗೌಡರ ರಾಜಕೀಯ ಜೀವನದಲ್ಲಿ ಎದುರಾದಂತಹ ಸಮಸ್ಯೆಗಳು, ರಾಜಕೀಯ ಹೋರಾಟ, ರೈತರ ಬಗ್ಗೆಗಿನ ಕಾಳಜಿ, ಕೆಲವು ಸನ್ನಿವೇಶಗಳಲ್ಲಿ ಎದುರಿಸಿದಂತಹ ಘಟನೆಗಳು ಇನ್ನು ಮುಂತಾದ ವಿಷಯಗಳನ್ನು ಹೊಂದಿರುವ ಪುಸ್ತಕ ಇದಾಗಿದು, ಇದೀಗ ಅವರ ಜೀವನ ಚರಿತ್ರೆ ಬರೆಯುತ್ತಿದ್ದು, ನವೆಂಬರ್ ವೇಳೆಗೆ ಪುಸ್ತಕ ಬಿಡುಗಡೆಗೊಳ್ಳಲಿದೆ ಎಂದರು. ಸಮಗ್ರ ವಾಸ್ತವಿಕ ಸತ್ಯವನ್ನು ಈ ಜೀವನ ಚರಿತ್ರೆ ಒಳಗೊಂಡಿರುತ್ತದೆ ಎಂದರು.

ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರ ಕುರಿತು ಇಂದು ಸಾಕಷ್ಟು ಚರ್ಚೆ ನಡೆಯುತ್ತಿದೆ. ದುರಾದೃಷ್ಟವೆಂದರೆ ಇದರಲ್ಲಿ ರಾಜಕಾರಣ ಸೇರಿಕೊಂಡಿದೆ. ಹೀಗಾಗಿಯೇ ವಿಷಯ ದಿನಕ್ಕೊಂದು ತಿರುವು ಪಡೆಯುತ್ತಿದೆ ಎಂದು ವೀರಶೈವ ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು.

Edited By

Suresh M

Reported By

jds admin

Comments