ಜೆಡಿಎಸ್ ಧೀಮಂತ ಶಕ್ತಿಯ ಸರ್ಕಾರ ಆಡಳಿತಕ್ಕೆ ತರಲು ಭರ್ಜರಿ ಸಿದ್ಧತೆ

15 Sep 2017 5:45 PM |
2006 Report

ಮಾಜಿ ಪ್ರಧಾನಿಮಂತ್ರಿ ದೇವೇಗೌಡರ ದಿಲ್ಲಿ ಅಧಿಕಾರ ಮತ್ತು ರಾಜ್ಯದಲ್ಲಿ ಕುಮಾರಸ್ವಾಮಿ ಆಡಳಿತ ಎಂದಿಗೂ ಮರೆಯಲಾಗುವುದಿಲ್ಲ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಹೃದಯ ಕುಮಾರಣ್ಣನದು,ಇಪ್ಪತ್ತು ತಿಂಗಳ ಅವಧಿಯಲ್ಲಿ ಆಡಳಿತ ಕೊಟ್ಟು ಜನರ ಮನದಲ್ಲಿ ಸಡಗರದ ಗರಿ ಬಿಚ್ಚಿಸಿದ ಕುಮಾರಣ್ಣನ ಕಾರ್ಯವೈಖರಿ ಕಂಡು ಮತ್ತೊಮ್ಮೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಮಹದಾಸೆ ಇರುವಂತಿದೆ.

ಕಾಂಗ್ರೆಸ್ ಪಕ್ಷದ ಹಿನ್ನಡೆಯನ್ನು ಸ್ವತಃ ಆ ಪಕ್ಷದ ನಾಯಕರುಗಳೇ ಮಾಡಿಕೊಳ್ಳುತ್ತಿರುವುದು ಒಂದು ಕಡೆ. ಇನ್ನು ಬಿಜೆಪಿಯ ವರ್ಚಸ್ಸು ಬರೀ ಮೋದಿಯನ್ನೇ ಅವಲಂಬಿಸಿದೆ. ಸ್ಥಳೀಯವಾಗಿ ಯೋಚಿಸಿದರೆ ಜೆಡಿಎಸ್ ಪಕ್ಷ ಮತ್ತೊಮ್ಮೆ ತನ್ನ ಖಾತೆಯನ್ನು ತೆರೆದು ಅಧಿಕಾರ ಮಾಡುವುದರಲ್ಲಿ ಎರಡು ಮಾತಿಲ್ಲ.ಬಡವರಿಗೆ ಹಲವಾರು ಉಪಯೋಗಕ್ಕೆ ಬರುವಂತ ಭಾಗ್ಯಲಕ್ಷ್ಮಿ ಯೋಜನೆ ಸೇರಿದಂತೆ, ಹಳ್ಳಿಗಳಲ್ಲಿ ದುಡಿದ ಯುವಕರು ಸಾರಾಯಿ ಕುಡಿದು, ಲಾಟರಿ ಗೀಳು ಅಂಟಿಸಿಕೊಂಡು ಹಾಳಾಗುತ್ತಿದ್ದುದನ್ನು ಗಮನಿಸಿ ನಿಷೇಧ ಮಾಡಿದ್ದು ಇತಿಹಾಸವಾಗಿ ಹೋಯಿತು.ಇಲ್ಲದಿದ್ದರೆ ಇಂದು ಎಷ್ಟೋ ಕುಟುಂಬಗಳು ಬೀದಿಗೆ ಬಂದು ಬೀಳುತ್ತಿದ್ದವು. ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ,ಕೃಷಿಕರ ಸಾಲಮನ್ನಾ ಮಾಡಿ ರೈತರ ಬಾಳಿಗೆ ಕಂಗೊಳಿಸುವ ಹಸಿರಾದವರು. ಎಲ್ಲೇ ಸಾವಾದರೂ ಎಲ್ಲೇ ನೋವಾದರೂ ಅಲ್ಲಿ ಹಾಜರು ಕುಮಾರಣ್ಣನ ಕುಟುಂಬ. ಆತ್ಮಹತ್ಯೆ ಮಾಡಿಕೊಂಡ ರೈತರುಗಳ ಕುಟುಂಬದವರ ಕಣ್ಣೀರು ಒರೆಸಿದವರು.

ತೊಡೆ ತಟ್ಟಿ, ಮೀಸೆ ತಿರುವಿ ಮೆರೆದವರೆಲ್ಲ ಮಣ್ಣಾದರು ಎಂಬಂತೆ, ತೊಡೆ ತಟ್ಟಿ ಸಮರ ಸಾರಿದವರು ಇಂದು ಹಗರಣಗಳ, ರಾಸಲೀಲೆಗಳ ಸರಮಾಲೆಯಲ್ಲಿ ನೇತಾಡುತ್ತಿದ್ದಾರೆ. ಬೆಂಗಳೂರಿಗೆ ಮೆಟ್ರೋ, ಬೆಳಗಾವಿಗೆ ಸುವರ್ಣವಿಧಾನಸೌಧವನ್ನು ನಿರ್ಮಿಸಿ, ಕುಡಿಯುವ ನೀರಿಗಾಗಿ ಕಾವೇರಿ ಯೋಜನೆಗೆ ನಾಲ್ಕನೆ ಹಂತದ ಆರಂಭ ಬೆಂಗಳೂರು ಮಹಾನಗರ ಪಾಲಿಕೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂದು ಮರುನಾಮಕರಣ ಮಾಡಿದರು. ನಮ್ಮ ನಾಡಿನ ಜನತೆ ಇಂತಹ ನಾಯಕನ ಬೆಂಬಲಕ್ಕೆ ನಿಂತಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Edited By

Hema Latha

Reported By

hdk fans

Comments