ಶಹಾಪುರನಗರದಲ್ಲಿ ಬೃಹತ್ ಜೆಡಿಎಸ್ ಸಮಾವೇಶ ಉದ್ಘಾಟಿಸಿದ ಎಚ್ ಡಿ ಕುಮಾರಸ್ವಾಮಿ

15 Sep 2017 11:39 AM |
2164 Report

ಪದವಿ ಕಾಲೇಜು ಮೈದಾನದಲ್ಲಿ ನಡೆಸಲು ಉದ್ದೇಶಿಸಿರುವ ಜಿಲ್ಲಾ ಜೆಡಿಎಸ್ ಸಮಾವೇಶ ಜಿಲ್ಲಾಮಟ್ಟದ ಬೃಹತ್ ಸಮಾವೇಶ .2018 ರ ಶಹಾಪುರ ವಿಧಾನಸಭೆಯ ಜೆಡಿಎಸ್ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿರುವ ಅಮೀನ್‍ರೆಡ್ಡಿ ಪಾಟೀಲ್ ನೇತೃತ್ವದಲ್ಲಿ ನಡೆಯಲಿರುವ ಸಮಾವೇಶವನ್ನು ಜೆಡಿಎಸ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಉದ್ಘಾಟಿಸಿದ್ದಾರೆ . 

ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡರೂ ಕೂಡಾ ಭಾಗವಹಿಸಲಿದ್ದಾರೆ ,ಸುಮಾರು 30 ಸಾವಿರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. ಸಮಾವೇಶಕ್ಕೆ ಭಾರೀ ವೇದಿಕೆ ನಿರ್ಮಾಣವಾಗಿದೆ. ವೇದಿಕೆಯೊಂದಕ್ಕೆ ಸುಮಾರು 25 ಲಕ್ಷ  ಖರ್ಚುಮಾಡಲಾಗುತ್ತಿದೆ , ಒಟ್ಟು 60 ಲಕ್ಷ ವೆಚ್ಚವಾಗುವುದೆಂದು ಅಂದಾಜಿಸಲಾಗಿದೆ. ಬೃಹತ್ ಸಮಾವೇಶಕ್ಕೆ ಬಂದವರಿಗೆ ಊಟದ ವ್ಯವಸ್ಥೆ ಕೂಡಾ ಮಾಡಲಾಗಿದೆ.

Edited By

Suresh M

Reported By

hdk fans

Comments