ಉಪ್ಪಿ`ಪ್ರಜಾಕಾರಣ’ದ ಮೇಲೆ ನನಗೆ ನಂಬಿಕೆಯಿದೆ ಅಂದ್ರು ಯಶ್
ರಾಜಕೀಯ ಎಂಟ್ರಿಗೆ ಯಶ್ ಹೇಳಿದ್ದು ಹೀಗೆ,ನಾನು ಉಪೇಂದ್ರ ಅವರ ಸ್ಪೂರ್ತಿಯಿಂದ ಸಿನಿಮಾರಂಗಕ್ಕೆ ಬಂದವನು. ಅವರು ಯಾವತ್ತೋ ರಾಜಕಾರಣಕ್ಕೆ ಬರಬೇಕಿತ್ತು, ತುಂಬಾ ತಡ ಮಾಡಿದ್ದಾರೆ. ಬದುಕನ್ನು ಕಟ್ಟಿಕೊಳ್ಳುವುದಕ್ಕೋಸ್ಕರ ಸಿನಿಮಾಗೆ ಬಂದಿರಬಹುದು. ಆದರೆ ಸಾರ್ವಜನಿಕ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕು ಎಂಬ ಕನಸುಗಳನ್ನು ಹೊಂದಿದ್ದಾರೆ ಎಂದು ನಟ ಯಶ್ ಹೇಳಿದರು.
ಜನರ ಕಲ್ಪನೆಯಲ್ಲಿ ರಾಜಕೀಯ ಎಂದರೆ ಒಂದು ವ್ಯವಸ್ಥಿತವಾದ ಭ್ರಷ್ಟಾಚಾರದ ವ್ಯವಸ್ಥೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಉಪ್ಪಿ ಸರ್,ಈಗಾಗಲೇ ಸಾಕಷ್ಟು ಬಾರಿ ಪರೋಕ್ಷವಾಗಿ ಮತ್ತು ಸಿನಿಮಾಗಳ ಮೂಲಕ ತಮ್ಮ ಕನಸುಗಳನ್ನು ಜನರ ಬಳಿ ತಲುಪಿಸಿದ್ದಾರೆ. ಅವರ ಕಲ್ಪನೆಯಲ್ಲಿ ಮೂಡಿಬರುತ್ತಿರುವ `ಪ್ರಜಾಕಾರಣ’ದ ಮೇಲೆ ನನಗೆ ನಂಬಿಕೆಯಿದೆ ಅಂದ್ರು.ಕೆಲಸ ಮಾಡಿ ಎನ್ನುವವನು ಎಂದಿಗೂ ಲೀಡರ್ ಆಗಲ್ಲ. ನಾವೆಲ್ಲ ಮಾಡೋಣ ಎಂದವರು ಮಾತ್ರ ಲೀಡರ್ ಆಗ್ತಾರೆ. ಯಾರೊಬ್ಬ ವ್ಯಕ್ತಿ ವ್ಯವಸ್ಥೆಯನ್ನು ಚೇಂಜ್ ಮಾಡ್ತಿನಿ ಎಂದು ಬರ್ತಾರೆ. ಹೀಗೆ ಬಂದವರಿಗೆ ಒಂದು ಅವಕಾಶವನ್ನು ನೀಡಬೇಕಾಗುತ್ತದೆ. ಉಪೇಂದ್ರ ಆಯ್ಕೆ ಮಾಡಿಕೊಂಡಿರುವ ದಾರಿ ತುಂಬಾ ಕಷ್ಟವಾದದ್ದು, ರಾಜಕೀಯದಲ್ಲಿ ನೀವು ಹೊಸತನ ತರುತ್ತೀರಿ ಎಂಬ ನಂಬಿಕೆಯಿದೆ. ನಾನು ನಿಮ್ಮ ಜೊತೆಯಲ್ಲಿ ಇರುತ್ತೇನೆ. ಎಂದು ಯಶ್ ಉಪ್ಪಿ ಪ್ರಜಾಕೀಯಕ್ಕೆ ಬೆಂಬಲ ನೀಡುವುದಾಗಿ ಹೇಳಿದರು.
Comments