ಮಳೆ ಸಂಕಷ್ಟಕ್ಕೆ ಮಾಸ್ಟರ್ ಪ್ಲಾನ್ ಮಾಡಿರುವ ನಟ ಉಪೇಂದ್ರ
ಉಪೇಂದ್ರ ಈಗಾಗಲೇ ರಾಜ್ಯದ ಅಭಿವೃದ್ಧಿ ಕುರಿತು ಹಲವು ವಿಚಾರಗಳನ್ನ ಚರ್ಚೆ ಮಾಡೋದ್ರಲ್ಲಿ ಬ್ಯೂಸಿಯಾಗಿದ್ದಾರೆ . ರಿಯಲ್ ಸ್ಟಾರ್ ರಿಯಲ್ ರಾಜಕಾರಣ ಕರ್ನಾಟಕದಲ್ಲಾಗುತ್ತಿರೋ ಸಮಸ್ಯೆಗಳನ್ನ ಬಗೆಹರಿಸೋ ಕುರಿತು ಈಗಾಗಲೇ ಒಂದಲ್ಲ ಒಂದು ಐಡಿಯಾ ಮಾಡ್ತಿದ್ದಾರೆ.ಇತ್ತೀಚೆಗಷ್ಟೇ ಅಮೆರಿಕದ ಎನ್ಆರ್ಐ ಒಬ್ಬರು ಮಳೆಯಿಂದಾಗೋ ಸಮಸ್ಯೆಯನ್ನ ಬಗೆಹರಿಸೋದು ಹೇಗೆ?
ಇಲ್ಲಿ ಆಗ್ತಿರೋ ತೊಂದರೆಗಳನ್ನ ಬಗೆಹರಿಸೋದು ಹೇಗೆ ಅನ್ನೋ ನಿಟ್ಟಿನಲ್ಲಿ ಹಲವು ಪ್ಲಾನ್ ಮಾಡಿ ,ಮಳೆ ಸಮಸ್ಯೆ ಬಗ್ಗೆ ಎನ್‍ಆರ್‍ಐ ಸೌರಭ್ ಬಾಬು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದು, ಉಪ್ಪಿ ಮುಂದಿಟ್ಟಿದ್ದಾರೆ.ಅಮೆರಿಕದ ಒಳಚರಂಡಿ ವ್ಯವಸ್ಥೆಯನ್ನ ಕಡಿಮೆ ವೆಚ್ಚದಲ್ಲಿ ಬೆಂಗಳೂರಲ್ಲೂ ನಿರ್ಮಿಸಬಹುದು.ಸಾವಿರಾರು ಕೋಟಿ ಹಣ ಬೇಡ. ಬರೀ 50% ಹಣ ಹಾಕಿದ್ರೆ ಸಾಕು ಸಮಸ್ಯೆಗೆ ಮುಕ್ತಿ ಸಿಗುತ್ತೆ ಅಂತ ಹೇಳಿದ್ದಾರೆ.
Comments