ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸದಂತೆ ಅಭಿಮಾನಿಗಳಿಗೆ ಮನವಿ ಮಾಡಿರುವ ಉಪ್ಪಿ
ಹುಟ್ಟುಹಬ್ಬ ಆಚರಣೆಯನ್ನ ಮಾಡದಿರುವ ನಟರ ಲಿಸ್ಟ್ ಗೆ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಸೇರ್ಪಡೆಆಗಿದ್ದಾರೆ. ಕಿಚ್ಚ ಸುದೀಪ್ರಂತೆಯೇ ಉಪೇಂದ್ರ ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರೋ ಉಪೇಂದ್ರ, “ಪ್ರೀತಿಯ ಅಭಿಮಾನಿಗಳೇ ಹಾರ, ಕೇಕ್, ಬ್ಯಾನರ್ಗಳಿಗೆ ಅನವಶ್ಯಕ ಖರ್ಚು ಮಾಡದೆ ನಿಮ್ಮ ಪ್ರೀತಿ ಶುಭಾಶಯಗಳೊಂದಿಗೆ ಬಂದು ನನ್ನ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಿ ಎಂದಿದ್ದಾರೆ. ಅನವಶ್ಯಕವಾಗಿ ಖರ್ಚಿಗೆ ಆಸ್ಪದ ನೀಡಬಾರದು ಎಂಬುದು ಉಪ್ಪಿಯ ನಿಲುವಾಗಿದೆ.
Comments