ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಉಪ್ಪಿ ಪುತ್ರಿ ಐಶ್ವರ್ಯ
ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ. ಉಪೇಂದ್ರರ ಮಗಳು ಐಶ್ವರ್ಯ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುವುದು ಪಕ್ಕಾ ಆಗಿದೆ.ಈ ತಿಂಗಳ 12ರಂದು ಉಪೇಂದ್ರ ನಾನು ಇನ್ನು ಮುಂದೆ ಜನರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿಕೊಂಡು ಪ್ರಜಾಕಾರಣದ ಮೂಲಕ ಜನರ ಏಳಿಗೆಗಾಗಿ ನಾನು ಪ್ರಯತ್ನಿಸುತ್ತಿದ್ದೇನೆ ಅಂತಾ ಹೇಳಿದ್ದರು.ಉಪ್ಪಿಯವರ ಹೊಸ ನಿಲುವಿನಿಂದ ಅಭಿಮಾನಿಗಳಲ್ಲಿ ಕೊಂಚ ನಿರಾಸೆ ಉಂಟಾಗಿತ್ತು.
ಉಪೇಂದ್ರ ಅವರು ರಾಜಕಾರಣಕ್ಕೆ ಎಂಟ್ರಿ ಉಪೇಂದ್ರ ಅವರು ಸಿನಿಮಾ ರಂಗಕ್ಕೆ ಗುಡ್ ಬೈ ಹೇಳುವ ಚಾನ್ಸ್ ಗಳಿವೆ. ಆದರೆ ಉಪ್ಪಿ ಕುಟುಂಬ ಮಾತ್ರ ಚಿತ್ರರಂಗದ ನಂಟನ್ನು ಬಿಟ್ಟಿಲ್ಲ. ಉಪೇಂದ್ರರ ಪತ್ನಿ ಪ್ರಿಯಾಂಕ ನಟನೆಯ `ಹೌರಾ ಬ್ರಿಡ್ಜ್’ ಸಿನಿಮಾದಲ್ಲಿ ತಾಯಿಯೊಂದಿಗೆ ಐಶ್ವರ್ಯಾ ಬಣ್ಣ ಹಚ್ಚಲಿದ್ದಾರೆ.ಐಶ್ವರ್ಯ ಉಪೇಂದ್ರ ಬಾಲ ನಟಿಯಾಗಿ `ಹೌರಾ ಬ್ರಿಡ್ಜ್’ನಲ್ಲಿ ಪ್ರಯಾಣ ಮಾಡುವುದು ಕನ್ಫರ್ಮ್ ಆಗಿದೆ. ಮುಂದಿನ ದಿನಗಳಲ್ಲಿ ಈ ಸಿನಿಮಾದ ಬಗ್ಗೆ ಹೇಳೋದು ಬಾಕಿ ಇದೆ. ಹೌರಾ ಬ್ರಿಡ್ಜ್ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಮೂಡಿಬರಲಿದೆ.
Comments