ಕಾಂಗ್ರೆಸ್ನಿಂದ ಮತ್ತೊಂದು ವಿಕೆಟ್ ಕಿತ್ತ ಜೆಡಿಎಸ್ ! ಶಾಸಕ ಬಾಲಕೃಷ್ಣಗೆ ಸೆಡ್ಡು ಹೊಡೆವರೇ ಈ ಅಭ್ಯರ್ಥಿ?
ಕಾಂಗ್ರೆಸ್ ಜೆಡಿಎಸ್ ಕಚೇರಿಯಾಗಿ ನೂರಕ್ಕೆ ನೂರು ಬದಲಾಗುತ್ತದೆ ನಾನು ಇದೇ ತಿಂಗಳ 17ಕ್ಕೆ ಜೆಡಿಎಸ್ ಸೇರ್ಪಡೆ ಖಚಿತ ಎಂದು ಹೇಳುವ ಮೂಲಕ ಕಾಂಗ್ರೆಸ್ ತೊರೆಯುವುದನ್ನ ಸ್ಪಷ್ಟಪಡಿಸಿದ್ಧಾರೆ.
ಈಗಾಗಲೇ ತಮ್ಮ ಕಚೇರಿಯಲ್ಲಿ ಸಾರಿಗೆ ಸಚಿವ ಎಚ್.ಎಂ.ರೇವಣ್ಣರ ಫೋಟೋ ಬಿಟ್ಟು ಬೇರೆಲ್ಲಾ ಫೋಟೋಗಳನ್ನು ಬದಲಾವಣೆ ಮಾಡಲಾಯಿಸುವುದು ಸತ್ಯ ಎಂಧು ಅಭ್ಯರ್ಥಿ ಎ.ಮಂಜು ಹೇಳಿದ್ದಾರೆ.ಮಾಗಡಿ ಗೌರಮ್ಮನ ಕೆರೆಯಾಣೆ ಸೆ.17 ನನ್ನ ಜೆಡಿಎಸ್ ಸೇರ್ಪಡೆ ಖಚಿತ. ಕಾಂಗ್ರೆಸ್ ಕಚೇರಿ ಅಂದಿನಿಂದ ಜೆಡಿಎಸ್ ಕಚೇರಿಯಾಗುತ್ತದೆ ಎಂದು ಸುದ್ದಿಗಾರರಿಗೆ ಹೇಳಿದ್ದಾರೆ. ಕಾಂಗ್ರೆಸ್ ಕಚೇರಿಯನ್ನು ಜೆಡಿಎಸ್ ಕಚೇರಿಯಾಗಿ ಬದಲಿಸಿದರೂ ಕೂಡ ಸಚಿವ ಎಚ್.ಎಂ.ರೇವಣ್ಣ ನನ್ನ ರಾಜಕೀಯ ಮಾರ್ಗದರ್ಶಕರು ಅವರ ಭಾವ ಚಿತ್ರವನ್ನು ಬದಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ಧಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು,ಎಚ್.ಡಿ.ಕುಮಾರಸ್ವಾಮಿಯವರು ತಾಲೂಕಿಗೆ ಬಂದು ಕ್ಷೇತ್ರದ ಅಭ್ಯರ್ಥಿಯಾದ ನಿನ್ನ ಹಿಂದಿರುವೆ ಎಂದು ಹೇಳುವುದನ್ನು ಕಾಯುತ್ತಿರುವೆ. ಈಗಾಗಲೇ ಕ್ಷೇತ್ರದಲ್ಲಿ ಎದ್ದಿರುವ ಶಾಸಕ ಬಾಲಕೃಷ್ಣರ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಳ್ಳುವೆ.ಈಗಾಗಲೇ ಬಾಲಕೃಷ್ಣರು ಸೋಲಿನ ಭಯದಿಂದ ಹತಾಶಾರಾಗಿದ್ದಾರೆ ಈ ಬಾರಿ ಗೆಲುವು ನನ್ನದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ಸಾಮಾನ್ಯ ರೈತ ಒಕ್ಕಲಿಗರ ಮಗನಾಗಿ ಇಂದು ಮಾಗಡಿ ಜನತೆಯ ಸೇವೆಗೆ ಬಂದಿರುವೆ. ನಿಜವಾದ ಬೇಸಾಯ ಮಾಡುವ ಒಕ್ಕಲಿಗರು ಕಪ್ಪುಬಣ್ಣದವರಾಗಿರುತ್ತಾರೊ ಅವರು ಒಕ್ಕಲಿಗರೇ ಅಲ್ಲ ಎಂದು ಬಾಲಕೃಷ್ಣ ಹೇಳುವುದಾದರೆ ಅಂತಹವರನ್ನು ಗೆಲ್ಲಿಸುವುದೆ ತಪ್ಪು ಎಂದು ಟಾಂಗ್ ನೀಡಿದರು.
Comments