ಜೆಡಿಎಸ್ ಸೇರಿದ ಯುವ ಪಡೆ !

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜೆಡಿಎಸ್ ಯುವ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಬಿಕಾಂ ಪದವಿಯಲ್ಲಿ ಓದುತ್ತಿರುವಾಗಲೆ ಗ್ರಾಮ ಪಂಚಾಯತ್ ಗೆ ಆಯ್ಕೆಗೊಂಡು ೨೧ ವರ್ಷಕ್ಕೆ ಗ್ರಾಮ ಪಂಚಾಯತಿ ಸದಸ್ಯನಾಗಿ ರಾಜ್ಯದ ಅತ್ಯಂತ ಕಿರಿಯ ಪಂಚಾಯತ ಸದಸ್ಯನೆಂಬ ಹಿರಿಮೆಗೆ ಪಾತ್ರನಾದ ಸಿರಸಿ ತಾಲೂಕಿನ ಹುತ್ಗಾರ ಪಂಚಾಯತದ 2ನೇ ವಾರ್ಡ್ ಸದಸ್ಯ ಪವನಕುಮಾರ ಹೆಗಡೆ ಕಾಂಗ್ರೆಸ್ ಪಕ್ಷವನ್ನು ತೊರೆದು ಶಶಿಭೂಷಣ ಹೆಗಡೆ, ಮಧು ಬಂಗಾರಪ್ಪ ಸಮ್ಮುಖದಲ್ಲಿ ಜೆ.ಡಿ.ಎಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಹಾಗೂ ಸೊರಬ ಕ್ಷೇತ್ರದ ಶಾಸಕ ಶ್ರೀ ಮಧು ಬಂಗಾರಪ್ಪ, ಸರಕಾರ,ನಾಯಕರ ಬದಲಾವಣೆಯು ಯುವ ಶಕ್ತಿಯ ಕೈಯಲ್ಲಿದೆ.ಏಕೆಂದರೆ ಯುವ ಶಕ್ತಿಯೇ ಅಂತಹುದಾಗಿದೆ. ಯುವ ಶಕ್ತಿಯನ್ನು ಪಕ್ಷವು ಎಂದಿಗೂ ಹಾದಿ ತಪ್ಪಿಸುವುದಿಲ್ಲ. ಜೆಡಿಎಸ್ನ ಶಶಿಭೂಷಣ ಹೆಗಡೆ ಮಾತನಾಡಿ, ರಾಜ್ಯದಲ್ಲಿ ನಿದ್ರಾವಸ್ಥೆಯಲ್ಲಿರುವ ಕೋಮುವಾದಿ ಸರ್ಕಾರವಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಯುವಕರನ್ನು ಪ್ರಚೋದಿಸುವ ಕೆಲಸಕ್ಕೆ ಸ್ವತಃ ಸರ್ಕಾರವೇ ಮುಂದಾಗಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು .
Comments