ವಿಧಾನಸಭಾ ಚುನಾವಣೆಗೆ 14 ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧ, ಅಧಿಕೃತ ಘೋಷಣೆಯೊಂದೇ ಬಾಕಿ

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಕ್ಷೇತ್ರವಾರು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯು ಬಹುತೇಕ ಸಿದ್ಧವಾಗಿದ್ದು, ಶೀಘ್ರವೇ ಈ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಜಿಲ್ಲೆಯಾಗಿರುವ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮೀಣ ಭಾಗಗಳಿಗೆ ಹೆಚ್ಚು ಜಾಗರೂಕತೆಯಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.ಚಾಮರಾಜನಗರದಿಂದ ಹರೀಶ್ ಗೌಡ್ರು ಆಯ್ಕೆ ಮಾಡಲಾಗಿದೆ ,ಆದರೆ ಯಾವ ಹೆಸರುಗಳೂ ಅಧಿಕೃತವಾಗಿ ಪ್ರಕಟಗೊಂಡಿಲ್ಲ.ಆದರೂ, ಕುತೂಹಲಕ್ಕಾಗಿ ಬೆಂಗಳೂರು ನಗರದ ಜೆಡಿಎಸ್ ಅಭ್ಯರ್ಥಿಗಳನ್ನು ಪಟ್ಟಿ ಹೀಗಿದೆ :
ಗಾಂಧಿ ನಗರ - ನಾರಾಯಣ ಸ್ವಾಮಿ ದಾಸರಹಳ್ಳಿ - ವಿಧಾನ ಪರಿಷತ್ ಮಾಜಿ ಸದಸ್ಯ ಇ. ಕೃಷ್ಣಪ್ಪ ಮಹಾಲಕ್ಷ್ಮಿ ಲೇಔಟ್ - ಶಾಸಕ ಗೋಪಾಲಯ್ಯ ರಾಜಾಜಿ ನಗರ - ಎಸ್.ಪಿ. ಆನಂದ್ ಪದ್ಮನಾಭ ನಗರ - ಗೋಪಾಲ್ ಹೆಬ್ಬಾಳ - ಹನುಮಂತೇ ಗೌಡ ಬ್ಯಾಟರಾಯನ ಪುರ - ಟಿ.ಎನ್. ಚಂದ್ರು ಮಹದೇವ ಪುರ - ಸತೀಶ್ ಯಶವಂತ ಪುರ - ಜವರಾಯ ಗೌಡ ಯಲಹಂಕ - ಕೃಷ್ಣಪ್ಪ ಜಯನಗರ - ರವಿಕುಮಾರ್ ಬಿಟಿಎಂ ಲೇಔಟ್ - ದೇವರಾಜ್ ರಾಜರಾಜೇಶ್ವರಿ ನಗರ - ಆರ್. ಪ್ರಕಾಶ್.
Comments