ವಿಸಿಟಿಂಗ್ ಕಾರ್ಡ್ ಗೆ ಸೀಮಿತವಾಗದೇ ಪಕ್ಷ ಸಂಘಟಿಸಿ- ಎಚ್.ಡಿ ಕುಮಾರಸ್ವಾಮಿ
ಪಕ್ಷದ ಹುದ್ದೆ ಹೊಂದಿದವರು ಕೇವಲ ವಿಸಿಟಿಂಗ್ ಕಾರ್ಡ್ ಗೆ ಸೀಮಿತವಾಗದೆ ಜನರ ಬಳಿ ತೆರಳಿ ಪಕ್ಷ ಸಂಘಟಿಸಬೇಕು ಎಂದು ಎಚ್.ಡಿ ಕುಮಾರಸ್ವಾಮಿ ತಮ್ಮ ಪಕ್ಷದ ನೂತನ ಪದಾಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿರುವ ಅವರು, ಸರ್ಕಾರದ ವೈಫಲ್ಯಗಳು ಹಾಗೂ ಬಿಜೆಪಿ ಲೋಪದೋಷಗಳನ್ನು ಜನರ ಬಳಿ ಹೋಗಿ ಅರಿವು ಮೂಡಿಸಬೇಕು. ಜನ ಸಂಪರ್ಕದಲ್ಲಿದ್ದರೆ ನಾಯಕರಾಗಿ ಹೊರ ಹೊಮ್ಮುತ್ತೀರಿ. ಪಕ್ಷವನ್ನು ಸಂಘಟಿಸುವ ಕೆಲಸದಲ್ಲಿ ಸಣ್ಣತನ ಮತ್ತು ಸಾಮರ್ಥ್ಯವನ್ನು ಬಿಡಬೇಕು ಎಂದು ಕಿವಿಮಾತು ಹೇಳಿದರು.
ಪಕ್ಷವು ನೀಡಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ಹೊಣೆಗಾರಿಕೆಯನ್ನು ಸದ್ಭಳಕೆ ಮಾಡಿಕೊಂಡರೆ ನಾಯಕರಾಗಿ ಬೆಳೆಯುತ್ತೀರಿ, ಮಾಧ್ಯಮಗಳ ಹೇಳಿಕೆ ನೀಡುವ ವೇಳೆ ನಾಯಕರು ಹಿಂದೆ ನಿಂತು ಕೊಂಡರೆ ನಾಯಕರಾಗುವುದಿಲ್ಲ, ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಜನರ ಬಳಿಗೆ ಹೋಗಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವುದರ ಕಡೆಗೆ ಕಾರ್ಯ ನಿರ್ವಹಿಸಬೇಕು, ಆಗ ಮಾತ್ರ ಜನರು ನಿಮ್ಮನ್ನು ನಾಯಕರನ್ನಾಗಿ ಬೆಳೆಸುತ್ತಾರೆ. ಜವಾಬ್ದಾರಿಗಳನ್ನು ವಹಿಸಿಕೊಂಡಿರುವರು ದುರುಪಯೋಗ ಮಾಡಿಕೊಳ್ಳಬಾರದು ಎಂದು ಹೇಳಿದರು. ಹಳೆ ಕರ್ನಾಟಕ, ಉತ್ತರ ಕರ್ನಾಟಕ ಮಾತ್ರವಲ್ಲ ಎಲ್ಲಾ ಭಾಗಗಗಳಲ್ಲಿಯೂ ಪಕ್ಷವನ್ನು ಬೆಂಬಲಿಸುವ ಭಾವನೆ ಇದೆ. ಇದನ್ನು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸದ್ಬಳಕೆ ಮಾಡಿಕೊಳ್ಳಬೇಕು. ಜನರ ಬಳಿಕೆ ಹೋಗದಿದ್ದರೆ ಜನರು ಎಲ್ಲಿ ಗುರುತಿಸುತ್ತಾರೆ ಎಂದರು.
Comments