ಬಿಬಿಎಂಪಿ ಮೇಯರ್‍ ಸ್ಥಾನಕ್ಕೆ ಸ್ಕೆಚ್ !ಕಾಂಗ್ರೆಸ್‍ಗೆ ಅಸಾಧ್ಯದ ಟಾಸ್ಕ್‌ ನೀಡಿದ ಜೆಡಿಎಸ್‍

14 Sep 2017 7:36 AM |
5248 Report

 ಕಾಂಗ್ರೆಸ್‍ಗೆ ಅಸಾಧ್ಯದ ಟಾಸ್ಕ್‌ನ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‍ ವರಿಷ್ಠ ಎಚ್ ಡಿ ಡಿ ಇಂತದ್ದೊಂದು ಪ್ರಸ್ತಾಪವನ್ನು ಗೃಹ ಸಚಿವ ಅವರ ಮುಂದಿಟ್ಟಿದ್ದಾರೆ.

ಕಳೆದ ವರ್ಷವೇ ಈ ಪ್ರಸ್ತಾಪ ಇಟ್ಟಿದ್ದರು. ಆದರೆ ಜೆಡಿಎಸ್‍ ಅಮಾನತು ಶಾಸಕರ ಹಸ್ತಕ್ಷೇಪದಿಂದ ಕಾಂಗ್ರೆಸ್‍ ಈ ಪ್ರಸ್ತಾಪವನ್ನು ಕಡೆಯ ಕ್ಷಣದಲ್ಲಿ ತಿರಸ್ಕರಿಸಿತ್ತು. ಆದರೆ ಈ ಬಾರಿ ಅಂತಹ ಅವಕಾಶ ಕಾಂಗ್ರೆಸ್‍ಗೆಇಲ್ಲ.ಮೇಯರ್ ಪಟ್ಟ ಇಲ್ಲದಿದ್ರೆ ಹೆಚ್ಚು ಸ್ಥಾಯಿ ಸಮಿತಿ ಸ್ಥಾನನೀಡಬೇಕೆಂದು ಹೇಳಿದೆ. ಚುನಾವಣೆ ವರ್ಷದಲ್ಲಿ ರಾಜ್ಯ ರಾಜಧಾನಿಯ ಹಿಡಿತ ಸಾಧಿಸಲು ಬಿಜೆಪಿ ಶತಾಯಗತಾಯ ಪ್ರಯತ್ನ ಆರಂಭಿಸಿದ್ದು, ಇದನ್ನುತಪ್ಪಿಸಲು ಜೆಡಿಎಸ್‍ ಮುಂದಿಡುವ ಎಲ್ಲಾ ಬೇಡಿಕೆಯನ್ನೂ ಪುರಸ್ಕರಿಸಲೇಬೇಕು ಅನ್ನುವ ಸ್ಥಿತಿ ಇದೆ.

ಸದಾ ಪರಿಸ್ಥಿತಿಯ ಲಾಭ ಪಡೆಯುವ ಜೆಡಿಎಸ್‍ಗೆ ಈ ಬಾರಿಯ ಮೇಯರ್‍ ಚುನಾವಣೆ ಅತ್ಯಂತ ಪ್ರಮುಖವಾಗಿದೆ. ಅತಿ ಹೆಚ್ಚು ಸದಸ್ಯ ಬಲ ಹೊಂದಿರುವ ಬಿಜೆಪಿ, ಎರಡನೇ ಅತಿ ಹೆಚ್ಚು ಸ್ಥಾನ ಹೊಂದಿರುವಕಾಂಗ್ರೆಸ್‍ ಎದುರು ಜೆಡಿಎಸ್‍ ಸಂಖ್ಯಾಬಲ ತೀರಾ ಕಡಿಮೆ. ಆದರೂ ಪರಿಸ್ಥಿತಿಯ ಲಾಭ ಪಡೆದು ಮೇಯರ್‍ ಸ್ಥಾನ ಗಿಟ್ಟಿಸಲು ಜೆಡಿಎಸ್‍ ಪ್ರಸ್ತಾಪವನ್ನು ಮುಂದಿಟ್ಟಿದೆ.

Edited By

Suresh M

Reported By

jds admin

Comments