ಪಕ್ಷದ ನೂತನ ಪದಾಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟ ಕುಮಾರಸ್ವಾಮಿ

ಮಂಗಳವಾರ ನಗರದಲ್ಲಿ ನಡೆದ ಪಕ್ಷದ ಶಾಸಕರು, ಸೋತ ಅಭ್ಯರ್ಥಿಗಳು ಹಾಗೂ ನೂತನ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ನೂತನ ಪದಾಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಪಕ್ಷದ ಹುದ್ದೆ ಹೊಂದಿದವರು ಕೇವಲ ವಿಸಿಟಿಂಗ್ ಕಾರ್ಡ್‌ಗೆ ಸೀಮಿತವಾಗದೆ ಜನರ ಬಳಿ ತೆರಳಿ ಪಕ್ಷ ಸಂಘಟಿಸಬೇಕು ಎಂದು ಪಕ್ಷದಲ್ಲಿ ದೇವೇಗೌಡರದ್ದು ಒಂದು ರೀತಿ, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರದ್ದು ಮತ್ತೊಂದು ರೀತಿ ಎಂಬುದು ಇಲ್ಲ. ಎಲ್ಲರ ಗುರಿ ಪಕ್ಷ ಸಂಘಟನೆ ಮಾತ್ರ’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.ಪಕ್ಷದಲ್ಲಿ ಸಕ್ರಿಯ ಆಗದವರನ್ನು ಕಿತ್ತು ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಈಗ ಹಳೆಯ ದಿನಗಳು ಇಲ್ಲ. ಪ್ರಸ್ತುತ ಇರುವ ನಾಯಕತ್ವ ಕಳಪೆಯಾಗಿಲ್ಲ. ಪಕ್ಷದಲ್ಲಿರುವವರು ಬದ್ಧತೆಯಿಂದಾಗಿ ಉಳಿದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಎಲ್ಲ ಮುಖಂಡರೂ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು ಮತ್ತು ಬಿಜೆಪಿಯ ಲೋಪದೋಷಗಳ ಬಗ್ಗೆ ಜನರ ಬಳಿಗೆ ಹೋಗಿ ಅರಿವು ಮೂಡಿಸಬೇಕು. ಜನಸಂಪರ್ಕದಲ್ಲಿದ್ದರೆ ನಾಯಕರಾಗಿ ಹೊರಹೊಮ್ಮುತ್ತೀರಿ. ಪಕ್ಷವನ್ನು ಸಂಘಟಿಸುವ ಕೆಲಸದಲ್ಲಿ ಸಣ್ಣತನ ಮತ್ತು ಸ್ವಾರ್ಥವನ್ನು ಬಿಡಬೇಕು ಎಂದು ಕಿವಿಮಾತು ಹೇಳಿದರು.
ಪಕ್ಷವು ನೀಡಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ಹೊಣೆಗಾರಿಕೆಯನ್ನು ಸದ್ಬಳಕೆ ಮಾಡಿಕೊಂಡರೆ ನಾಯಕರಾಗಿ ಬೆಳೆಯುತ್ತೀರಿ. ಮಾಧ್ಯಮಗಳಿಗೆ ಹೇಳಿಕೆ ನೀಡುವ ವೇಳೆ ನಾಯಕರ ಹಿಂದೆ ನಿಂತುಕೊಂಡರೆ ನಾಯಕರಾಗುವುದಿಲ್ಲ. ವಿವಿಧ ಹುದ್ದೆಗಳ ಜವಾಬ್ದಾರಿಯನ್ನು ವಹಿಸಿಕೊಂಡವರು ಕೇವಲ ವಿಸಿಟಿಂಗ್ ಕಾರ್ಡ್‌ಗೆ ಸಿಮೀತವಾಗಬಾರದು ಹಾಗೂ ಅವುಗಳನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಹೇಳಿದರು.
ಇಸ್ರೇಲ್‌ಗೆ ಭೇಟಿ ನೀಡಿದ ವೇಳೆ ಸಮಯವನ್ನು ವ್ಯರ್ಥ ಮಾಡದೆ, ಹೈನುಗಾರಿಕೆ, ಸಣ್ಣ ನೀರಾವರಿ, ಕೃಷಿ ಸೇರಿದಂತೆ ರೈತರು ಯಾವ ಬೆಳೆಗಳನ್ನು ಬೆಳೆದರೆ ಲಾಭ ಗಳಿಸಬಹುದು ಎಂಬುದರ ಕುರಿತು ಅಧ್ಯಯನ ನಡೆಸಿದ್ದೇನೆ. ರೈತರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಂಬಂಧ ರೂಪರೇಷೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ನೀವು ದುಡಿಮೆ ಮಾಡದಿದ್ದರೆ ನಾನೊಬ್ಬನೇ ಏನೂ ಮಾಡಲಾಗದೆಂದರು.
Comments