ಮಳೆಯಾಗದ ಹಿನ್ನೆಲೆ : ಗಣೇಶ ಮೂರ್ತಿಯನ್ನು ಸಮಾಧಿ ಮಾಡಿದ ರೈತ

13 Sep 2017 12:21 PM | General
70 0 Report

ಗಣೇಶ ತಮ್ಮ ಊರಿಗೆ ಮಳೆ ನೀಡದ ಹಿನ್ನೆಲೆಯಲ್ಲಿ ರೈತನೊಬ್ಬ ಗಣೇಶ ಮೂರ್ತಿಯ ಮೇಲೆ ಕೋಪಗೊಂಡು ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವ ಬದಲು ಮಣ್ಣಿನಲ್ಲಿ ಸಮಾಧಿ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ಗ್ರಾಮದ ನಸಲಾಪುರದಲ್ಲಿ ನಡೆದಿದೆ. ಈ ಗ್ರಾಮದ ನಿವಾಸಿ 24 ವರ್ಷದ ಶಿವನಗೌಡ ಪಾಟೀಲ್ ತಮ್ಮ ಮನೆಯಲ್ಲಿ ಕೂರಿಸಿದ್ದ ಗಣೇಶ ಮೂರ್ತಿಯನ್ನು ಮಂಗಳವಾರ ನೀರಿನಲ್ಲಿ ಬಿಡುವ ಬದಲು ಸಮಾಧಿ ಮಾಡಿದ್ದಾನೆ.

ಆತನ ಕುಟುಂಬಸ್ಥರು ,ಸ್ನೇಹಿತರು ಹಾಗೂ ಗ್ರಾಮಸ್ಥರು ಗಣೇಶ ಬಪ್ಪ ಮೋರ್ಯ ಎಂಬ ಘೋಷಣೆ ಕೂಗಿದರು .ಗಣೇಶ ಮೂರ್ತಿಯನ್ನು ಸಮಾಧಿ ಮಾಡಿರುವುದರಿಂದ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೆದರಿ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು, ನಂತರ ಒಪ್ಪಿಕೊಂಡರು .2005 ರಿಂದ ಈ ಭಾಗದಲ್ಲಿ ಸಾಕಷ್ಟು ಮಳೆ ಬೀಳುತ್ತಿಲ್ಲ . ಹೀಗಾಗಿ ಉತ್ತಮ ಮಳೆಗಾಗಿ ಗಣೇಶನಲ್ಲಿ ಪ್ರಾರ್ಥನೆ ಮಾಡಿದರು ಸಹ ಮಳೆಯಾಗದ ಪರಿಣಾಮ ಗಣೇಶ ಮೂರ್ತಿಯನ್ನು ಸಮಾಧಿ ಮಾಡಿರುವುದಾಗಿ ಹೇಳಿದ್ದಾರೆ.

Courtesy: Kannadaprabha

Edited By

Hema Latha

Reported By

Madhu shree

Comments

Upload

Upload News

Create

Create Community