ತಜ್ಞರ ಮಾಹಿತಿ ಪ್ರಕಾರ ಕಲಬುರ್ಗಿ , ಗೌರಿ ಹತ್ಯೆಗೆ ಒಂದೇ ರೀತಿಯ ಪಿಸ್ತುಲ್ ಬಳಕೆ

13 Sep 2017 11:29 AM | Politics
78 0 Report

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೆ ಬಳಸಲಾದ ಪಿಸ್ತುಲ್ ಹಾಗು ಕಲಬುರ್ಗಿ ಅವರ ಹತ್ಯೆಗೆ ಬಳಸಲಾದ ಪಿಸ್ತುಲ್ ಎರಡು ಒಂದೇ ಮಾದರಿಯದು ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ತಿಳಿಸಿದ್ದಾರೆ. ಗೌರಿಯವರ ಹತ್ಯೆಗೆ 7.65 ಎಂ. ಎಂ ಪಿಸ್ತುಲ್ ಬಳಕೆ ಮಾಡಲಾಗಿದೆ. ಗೋವಿಂದ್ ಪಿಸ್ಸಾರೆ, ದಾಬೋಲ್ಕರ್,ಎಂ.ಎಂ ಕಲಬುರ್ಗಿ ಹಾಗೂ ಗೌರಿ ಹತ್ಯೆಗೆ ಒಂದೇ ರೀತಿ ಪಿಸ್ತುಲ್ ಬಳಕೆಯಾಗಿದೆ ಎಂದು ಶಂಕಿಸಲಾಗಿದೆ.

ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತಂಡ ಬೆಂಗಳೂರು ಸೇರಿದಂತೆ ವಿವಿಧ ಜಲ್ಲೆಗಳಲ್ಲಿ ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ .ತನಿಖೆಯಲ್ಲಿ 80 ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.ಇನ್ನು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿರುವ ಅಧಿಕಾರಿಗಳು ಹತ್ಯೆಯಾದ ದಿನ ಗೌರಿಯವರ ನಿವಾಸದ ಮುಂದೆ ಅನಾಮಧೇಯ ವ್ಯಕ್ತಿಯೊಬ್ಬ ಕಪ್ಪು ಹೆಲ್ಮೆಟ್ ಧರಿಸಿ ಪದೇ ಪದೇ ಓಡಾಡುತ್ತಿರುವ ದೃಶ್ಯ ಕಂಡು ಬಂದಿದೆ.

Courtesy: Kannadaprabha

Edited By

Hema Latha

Reported By

Madhu shree

Comments

Upload

Upload News

Create

Create Community