ಜೆಡಿಎಸ್ ಕಾರ್ಯಕರ್ತರಿಗೆ ಪಕ್ಷ ಸಂಘಟನೆ ಕಡೆ ಗಮನ ಹರಿಸುವಂತೆ ಗೌಡರ ಕರೆ

ಶೇಷಾದ್ರಿಪುರಂನಲ್ಲಿನ ಪಕ್ಷದ ಕಚೇರಿಯಲ್ಲಿ ಬೂತ್ ಮಟ್ಟದ ಪ್ರಮುಖರ ಸಭೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ದೇವೇಗೌಡರು, ಬೂತ್ ಮಟ್ಟದ ಎಲ್ಲ ಸದಸ್ಯರಿಗೆ ಅಲ್ಲಿನ ಕೊರತೆ ಬಗ್ಗೆ ಮಾಹಿತಿ ನೀಡಲು ಸೂಚನೆ ನೀಡಿದರು ಮತ್ತು…..
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಮ್ಯಾಜಿಕ್ ನಂಬರ್ 113 ದಾಟಬೇಕು. ಅಲ್ಲಿಯವರೆಗೂ ಯಾರೂ ವಿರಮಿಸದೆ ಪಕ್ಷ ಸಂಘಟಿಸಿ ಎಂದು ಮುಖಂಡರು ಹಾಗೂ ಕಾರ್ಯಕರ್ತರಿಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕರೆ ನೀಡಿದ್ದಾರೆ
ಎಲ್ಲ ಸದಸ್ಯರು ತ್ವರಿತಗತಿಯಲ್ಲಿ ಕಾರ್ಯಪ್ರವೃತ್ತರಾಗಬೇಕು. 2018 ರ ಚುನಾವಣೆಯಲ್ಲಿ ಮ್ಯಾಜಿಕ್ ನಂಬರ್ 113 ದಾಟಲೇಬೇಕು. ಯಾವುದೇ ಕಾರಣಕ್ಕೂ 8 ತಿಂಗಳು ಬೂತ್ ಮಟ್ಟದ ಸದಸ್ಯರು ಪಕ್ಷ ಸಂಘಟನೆ ಬಗ್ಗೆ ಅಸಡ್ಡೆ ತೋರಿಸಬಾರದು ಎಂದು ತಾಕೀತು ಮಾಡಿದರು.
Comments