ಕಿಂಗ್ ಮೇಕರ್ ಜೆಡಿಎಸ್ ಕಿಂಗ್ ಆಗಲು ಪಟ್ಟು
ಬೆಂಗಳೂರು: ಭಾನುವಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರ ಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಪೋರೇಟರ್ ಳು ಪಾಲ್ಗೊಂಡಿದ್ದ ರು. ಸೆಪ್ಟಂಬರ್ 28 ರಂದು ನಡೆಯುವ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಗೆ ಮೇಯರ್ ಹುದ್ದೆ ನೀಡಬೇಕೆಂಬ ನಿರ್ಧಾರ ಕೈಗೊಂಡಿದ್ದಾರೆ.
ಕಳೆದ ಎರಡು ಅವಧಿಗೆ (ಅಂದರೆ ಪ್ರತಿ ಮೇಯರ್ ಗೆ 1 ವರ್ಷ) ಕಾಂಗ್ರೆಸ್ ಅಭ್ಯರ್ಥಿಗಳಾದ ಬಿಎನ್ ಮಂಜುನಾಥ ರೆಡ್ಡಿ ಮತ್ತು ಪದ್ಮಾವತಿ ಅವರು ಮೇಯರ್ ಆಗಲು ಜೆಡಿಎಸ್ ಬೆಂಬಲ ನೀಡಿತ್ತು, ಜೊತೆಗೆ ಜೆಡಿಎಸ್ ಗೆ ಉಪ ಮೇಯರ್ ಹುದ್ದೆ ನೀಡಲಾಗಿತ್ತು. ಹೀಗಾಗಿ ಈ ವರ್ಷ ಜೆಡಿಎಸ್ ಗೆ ಮೇಯರ್ ಹುದ್ದೆ ನೀಡಬೇಕಿದ್ದು, ಅದಕ್ಕೆ ಕಾಂಗ್ರೆಸ್ ಬೆಂಬಲ ನೀಡಬೇಕಿದೆ. ವಿಧಾನಸಭೆ ಚುನಾವಣೆ ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೊತೆ ವ್ಯವಹರಿಸುವುದು ಜೆಡಿಎಸ್ ಗೆ ಸ್ವಲ್ಪ ಕಠಿಣವಾಗುತ್ತಿದೆ.
ಈ ಬಾರಿ ನಮಗೆ ಮೇಯರ್ ಸ್ಥಾನ ನೀಡಬೇಕಿದೆ, ಈ ಸಂಬಂಧ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಅಂತಿಮ ನಿರ್ಧಾರ ಕೈಗೊಳ್ಳಲ್ದಿದ್ದಾರೆ ಎಂದು ಜೆಡಿಎಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
Comments