ಜೆಡಿಎಸ್‍ನಿಂದ ಅಮಾನತಾಗಿದ್ದ ಶಾಸಕರಿಗೆ ಸಡ್ಡು ಹೊಡೆಯಲು ದೇವೇಗೌಡರಿಂದ ಪ್ಲಾನ್‌ ಫಿಕ್ಸ್ !

11 Sep 2017 5:26 PM |
6844 Report

ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಸೇರುವುದು ಖಚಿತವಾದ ಬೆನ್ನಲೇ, ಆ ಪಕ್ಷದ ಅತೃಪ್ತರನ್ನು ಸೆಳೆದು ಅಮಾನತಾಗಿದ್ದ ಶಾಸಕರಿಗೆ ಸಡ್ಡು ಹೊಡೆಯಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮುಂದಾಗಿದರೆ...

ನಾಗಮಂಗಲದಲ್ಲಿ ಈಗಾಗಲೆ ಕಾಂಗ್ರೆಸ್​ನ ಅತೃಪ್ತ ಮಾಜಿ ಶಾಸಕರಾದ ಸುರೇಶ್​ಗೌಡ, ಎಲ್.ಆರ್. ಶಿವರಾಮೇಗೌಡ ಜೆಡಿಎಸ್ ಸೇರಿದ್ದಾರೆ. ಹಗರಿಬೊಮ್ಮನಹಳ್ಳಿ ಹೊರತುಪಡಿಸಿ ಇನ್ನುಳಿದ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್​ನವರನ್ನೇ ಪಕ್ಷಕ್ಕೆ ಸೆಳೆದು ಟಿಕೆಟ್ ಕೊಡಲು ಗೌಡರು ತೀರ್ವನಿಸಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡಿರುವ ಶಾಸಕರನ್ನು ಸೋಲಿಸಿ ಮುಯ್ಯಿಗೆ ಮುಯ್ಯಿಗೆ ತೀರಿಸಿಕೊಳ್ಳುವ ಕಾರ್ಯತಂತ್ರ ಹೆಣೆದಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್ ಅಹ್ಮದ್ ಆಪ್ತ ಬಳಗದಲ್ಲಿರುವ ಗೋವಿಂದರಾಜು ಅವರನ್ನು ಸೆಳೆದು ಅಭ್ಯರ್ಥಿ ಮಾಡಲಾಗುತ್ತಿದೆ. ಪುಲಿಕೇಶಿನಗರದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಎದುರು ಸೋತಿದ್ದ ಮಾಜಿ ಶಾಸಕ ಪ್ರಸನ್ನಕುಮಾರ್ ಅವರನ್ನು ಕರೆ ತರುವ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆದಿದೆ.

ಮಾಗಡಿಯಲ್ಲಿ ಕಾಂಗ್ರೆಸ್​ನ ಜಿ.ಪಂ.ಸದಸ್ಯ ಎ.ಮಂಜು ಅವರನ್ನು ಅಭ್ಯರ್ಥಿಯನ್ನಾಗಿಸುವ ಮೂಲಕ ಬಾಲಕೃಷ್ಣರನ್ನು ಸೋಲಿಸಲು ಈಗಾಗಲೆ ಚರ್ಚೆ ನಡೆಸಲಾಗಿದೆ. ನಾಗಮಂಗಲದಲ್ಲಿ ಸುರೇಶಗೌಡರೇ ಅಭ್ಯರ್ಥಿ ಎಂದು ಪ್ರಕಟಿಸಲಾಗಿದೆ. ಶ್ರೀರಂಗಪಟ್ಟಣದಲ್ಲಿ ಎಸ್.ಎಂ.ಕೃಷ್ಣ ಅವರ ಬೆಂಬಲಿಗ ರವೀಂದ್ರ ಶ್ರೀಕಂಠಯ್ಯ ಅವರೊಂದಿಗೆ ಮಾತುಕತೆ ನಡೆದಿದೆ. ಗಂಗಾವತಿಯಲ್ಲಿ ಕಾಂಗ್ರೆಸ್ ಮುಖಂಡ, ಮೇಲ್ಮನೆ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್ ಅವರನ್ನು ಕರೆತರುವ ಬಗ್ಗೆ ಗೌಡರು ತೀರ್ವನಿಸಿದ್ದಾರೆ. ಹಗರಿಬೊಮ್ಮನಹಳ್ಳಿಯಲ್ಲಿ ಮಾತ್ರ ಜೆಡಿಎಸ್ ಕಾರ್ಯಕರ್ತರೊಬ್ಬರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ.

 

 

 

Edited By

Suresh M

Reported By

jds admin

Comments