ಸಿಗುತ್ತಾ ಜೆಡಿಎಸ್ ಗೆ ಬಿಬಿಎಂಪಿ ಮೇಯರ್ ಪಟ್ಟ ?
ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವ ಜೆಡಿಎಸ್ ಈ ಬಾರಿ ಮೇಯರ್ ಪಟ್ಟಕ್ಕಾಗಿ ಬೇಡಿಕೆ ಇಟ್ಟಿದೆ. ಮೇಯರ್ ಪಟ್ಟ ಕೊಟ್ಟರೆ ಮೈತ್ರಿ ಮುಂದುವರೆಸುವುದಾಗಿ ಹೇಳಿದ್ದು…
ಮೇಯರ್ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ ,ಬಿಬಿಎಂಪಿಯಲ್ಲಿನ ಮೈತ್ರಿ 5 ವರ್ಷ ಅಂದ್ರು ದೇವೇಗೌಡ್ರು! ಪ್ರಸ್ತುತ ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ (ಕಾಂಗ್ರೆಸ್), ಉಪ ಮೇಯರ್ ಎಂ.ಆನಂದ (ಜೆಡಿಎಸ್). ಮೇಯರ್ ಆಯ್ಕೆಗೆ ಮ್ಯಾಜಿಕ್ ನಂ 134 ಬಿಬಿಎಂಪಿಯ ಮತದಾರರ ಪಟ್ಟಿ ಪ್ರಕಾರ 198 ಬಿಬಿಎಂಪಿ ಸದಸ್ಯರು. 68 ಜನಪ್ರತಿನಿಧಿಗಳು (28 ಶಾಸಕರು, 25 ಪರಿಷತ್ ಸದಸ್ಯರು, 10 ರಾಜ್ಯಸಭಾ ಸದಸ್ಯರು, 5 ಸಂಸದರು) ಸೇರಿ 266 ಜನರು ಮತ ಚಲಾವಣೆ ಮಾಡಲಿದ್ದಾರೆ. ಆದ್ದರಿಂದ, ಮೇಯರ್ ಆಯ್ಕೆಯಾಗಲು ಮ್ಯಾಜಿಕ್ ನಂಬರ್ 134. ಜೆಡಿಎಸ್ ಈ ಬಾರಿ ಮೇಯರ್ ಪಟ್ಟಕ್ಕಾಗಿ ಬೇಡಿಕೆ ಇಟ್ಟಿದೆ.
Comments