ಜೆಡಿಎಸ್‍ನಿಂದ ಅಮಾನತಾಗಿದ್ದ ಶಾಸಕ ಎಚ್.ಸಿ. ಬಾಲಕೃಷ್ಣ ಗೆ ಕಾಂಗ್ರೆಸ್ನಿಂದಲೂ ಟಿಕೆಟ್ ಸಿಗೋದು ಡೌಟ್

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಗಲಾಟೆ ನಡೆದಿದ್ದು, ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ಶಾಸಕ ಎಚ್.ಸಿ. ಬಾಲಕೃಷ್ಣ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಬಾಲಕೃಷ್ಣಗೆ ಕಾಂಗ್ರೆಸ್ನಿಂದ ಟಿಕೆಟ್ ನೀಡುವ ಬಗ್ಗೆ ಅಕ್ಷೇಪವೆತ್ತಿದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ.ಎಚ್.ಸಿ. ಬಾಲಕೃಷ್ಣ ಕಾಂಗ್ರೆಸ್ ಪಕ್ಷಕ್ಕೆ ಸೇರಲಿ. ಆದರೆ, ಅವರಿಗೆ ಸೀಟ್ ನೀಡಿದರೆ ಖಂಡಿತಾ ಗೆಲ್ಲುವುದಿಲ್ಲ. ಅವರಿಗೆ ಟಿಕೆಟ್ ನೀಡಿದರೆ ನಾವು ಸಹ ಮತ ಹಾಕಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪಕ್ಷದ ಮುಖಂಡರು ಸೂಕ್ತ ಕ್ರಮ ಕೈಗೊಳ್ಳಬೇಕು. ಪಕ್ಷಕ್ಕಾಗಿ ದುಡಿದ ಮಂಜುನಾಥ್‌ಗೆ ಸೀಟ್ ಕೊಡಬೇಕು. ಇಷ್ಟು ದಿನ ಅವರು ನಮ್ಮ ಎದುರಾಳಿಯಾಗಿ ಇದ್ದರು. ಈಗ ಅವರು ಕಾಂಗ್ರೆಸ್‌ಗೆ ಬಂದ್ರೆ ವೋಟ್ ಹಾಕೋದು ಹೇಗೆ? ಎಂದು ಕಾಂಗ್ರೆಸ್ ಸಭೆಯಲ್ಲಿ ಡಿ.ಕೆ. ಶಿವಕುಮಾರ್‌ಗೆ ಪ್ರಶ್ನೆ ಹಾಕಿದ್ದಾರೆ.
Comments