ಕೆಂಪಯ್ಯ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
'ಸೀಜ್ ಮಾಡಿದ ಚಿನ್ನ ಮಾರಿಕೊಂಡ ಅಧಿಕಾರಿಗಳಿಂದ ಯಾವ ತನಿಖೆ ನಿರೀಕ್ಷೆ ಮಾಡಲು ಸಾಧ್ಯ?. ಅಧಿಕಾರಿಗಳು ಮೂರು ದಿನದಿಂದ ಸಿಸಿಟಿವಿ ನೋಡುತ್ತಾ ಕುಳಿತಿದ್ದಾರೆ' ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
'ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿದ್ದು ಕೆಂಪಯ್ಯ ಅವರ ಸಲಹೆಯಂತೆಯೇ? ಎಂದು ಜನರಿಗೆ ತಿಳಿಸಿ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದರು. ಶೇಷಾದ್ರಿಪುರಂನಲ್ಲಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು, 'ಗೃಹ ಸಚಿವ ರಾಮಲಿಂಗಾ ರೆಡ್ಡಿ ಗಮನಕ್ಕೆ ತಂದು ಎಸ್‌ಐಟಿ ರಚನೆ ಮಾಡಿದ್ದಾರೋ?. ಕೆಂಪಯ್ಯ ಸಲಹೆಯಂತೆ ರಚನೆ ಮಾಡಲಾಗಿದೆಯೋ? ಎಂದು ಜನರಿಗೆ ತಿಳಿಸಬೇಕು' ಎಂದು ಒತ್ತಾಯಿಸಿದರು.
Comments