ಜೆಡಿಎಸ್ ಅಧಿಕಾರಕ್ಕೆ ತರಲು HDD,HDK ಮಾಸ್ಟರ್ ಪ್ಲಾನ್
ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಶತಾಯ ಗತಾಯ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿರುವ ಜೆಡಿಎಸ್ ವರಿಷ್ಟ ದೇವೇಗೌಡರು ಹೊಸ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿರುವ ಬಿಜೆಪಿ ಒಗ್ಗಟ್ಟಿನ ಮಂತ್ರದೊಂದಿಗೆ ಪಕ್ಷ ಸಂಘಟಿಸಿಕೊಳ್ಳುತ್ತಿದೆ ಅದರಂತೆ ರಾಜ್ಯದಲ್ಲಿ ಎಲ್ಲೆಲ್ಲಿ ಜೆಡಿಎಸ್ ಗೆಲ್ಲಬಹುದು ಎಂಬ ಕ್ಷೇತ್ರಗಳ ಬಗ್ಗೆ ವಿಶೇಷ ಗಮನ ನೀಡಲು ಮತ್ತು ರಾಜ್ಯದಲ್ಲಿಪಕ್ಷ ಸಂಘಟನೆಗಾಗಿ ಹೊರಟಿರುವ ಈ ಪ್ರವಾಸದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮೂರು ತಿಂಗಳುಗಳ ಕಾಲ ನಿರಂತರ ಪ್ರವಾಸ ಮಾಡಲು ನಿರ್ಧರಿಸಿದ್ಧಾರೆ.
ಎಚ್ಡಿಡಿ ಮತ್ತು ಎಚ್ಡಿಕೆ ನೇತೃತ್ವದ 2 ತಂಡಗಳಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು ರಾಜ್ಯದಲ್ಲಿ ಬೂತ್ ಕಮಿಟಿ, ತಾಲೂಕು ಘಟಕ ರಚನೆ ಜೊತೆಗೆ ಸಂಘಟನೆಗೆ ಹಾಗೂ ಎಲ್ಲೆಲ್ಲಿ ಪಕ್ಷ ಸಂವರ್ಧನೆಗೆ ಒತ್ತು ನೀಡಬೇಕು ಎಂಬುದರ ಬಗ್ಗೆ ಎಂದು ಹೇಳಿದರು.
ಮಂಗಳೂರು ಪ್ರಕರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡವಳಿಕೆ ಖಂಡನೀಯ. ಈ ವಿಷಯದಲ್ಲಿ ಶಕ್ತಿ ಪ್ರದರ್ಶನದ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಅಸಮಾಧಾನ
ವ್ಯಕ್ತಪಡಿಸಿದರು.
Comments