ಜೆಡಿಎಸ್‍ನಿಂದ ಅಮಾನತಾಗಿದ್ದ ಶಾಸಕರಿಗೆ ಮತ ಚಲಾವಣೆಯ ಹಕ್ಕು ಕ್ಯಾನ್ಸಲ್!
ತಿಂಗಳಾಂತ್ಯಕ್ಕೆ ಚುನಾವಣೆ ನಡೆಯಲಿದೆ ಕೌನ್ಸಿಲ್ ಕಾರ್ಯದರ್ಶಿಯಿಂದ ಮತದಾರರ ಪಟ್ಟಿ ಪ್ರಾದೇಶಿಕ ಆಯುಕ್ತರ ಕಚೇರಿಗೆ ರವಾನೆಯಾಗಿರುವುದರಿಂದ ತಿಂಗಳಾಂತ್ಯದಲ್ಲಿ ಬಿಬಿಎಂಪಿ ಮೇಯರ್‍ಗೆ ಚುನಾವಣೆ ನಡೆಯಲಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಎಂಟು ಎಂಎಲ್‍ಸಿಗಳು ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಿ ವಿಧಾನ ಪರಿಷತ್‍ನಿಂದ ಟಿಎ ಪಡೆದು ವಂಚಿಸಿದ್ದಾರೆ ಎಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಚುನಾವಣಾ ಆಯೋಗ ಮತ್ತು ಸಭಾಪತಿಗಳಿಗೆ ದೂರು ನೀಡಿದ್ದರು. ಹೀಗಾಗಿ ಮೇಯರ್ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ತೆಗೆಯಲಾಗಿದೆ . ಈ ಬಾರಿಯ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ.
Comments