ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಧಾರವಾಡದಲ್ಲಿ ಜೆಡಿಎಸ್ ಶಹರ ಘಟಕದಿಂದ ಪ್ರತಿಭಟನೆ
ಇಂದು ಧಾರವಾಡದಲ್ಲಿ ರಾಜ್ಯ ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಬಜಂತ್ರಿ ನೇತ್ರತ್ವದಲ್ಲಿ ಪ್ರತಿಭಟನೆ.
ಖ್ಯಾತ ಪತ್ರಕರ್ತೆ ಚಿಂತಕಿ ಹಾಗೂ ಸಾಹಿತಿ ದಿವಂಗತ ಗೌರಿ ಲಂಕೇಶ್ ರವರ ಹತ್ಯೆಯನ್ನು ಖಂಡಿಸಿ ಧಾರವಾಡ ಶಹರ ಜೆಡಿಎಸ್ ವತಿಯಿಂದ ಪ್ರತಿಭಟನೆ ಮಾಡಿ ರಾಜ್ಯದಲ್ಲಿ ಸಾಮರಸ್ಯಕ್ಕಾಗಿ ಹೋರಾಡುವವರಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಕೊಲೆ ಆರೋಪಿಗಳನ್ನು ತಕ್ಷಣ ಬಂಧನ ಮಾಡಬೇಕೆಂದು ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ರಾಜ್ಯ ಜೆಡಿಎಸ್ ಉಪಾಧ್ಯಕ್ಷರಾದ ಗುರುರಾಜ ಹುಣಸಿಮರದ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಭಜಂತ್ರಿ, ಶಹರ ಜೆಡಿಎಸ್ ಅಧ್ಯಕ್ಷರಾದ ಶ್ರೀ ಸುರೇಶ ಹಿರೇಮಠ,ಶಾಂತವಿರ ಬೆಟಗೆರಿ,ವೆಂಕಟೆಶ ಸಗಬಾಲ, ಹಾಗು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
Comments