ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ : ಪ್ರಧಾನಿ ಮೋದಿಯನ್ನು ಎಳೆದುತಂದ ರಾಹುಲ್ ಗಾಂಧಿ !!
ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಹತ್ಯೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ಖಂಡನೀಯ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿಗಳಾಗಿದ್ದಾರೆ. ಅವರು ಈಗ ಯಾವುದೇ ಒಂದು ಪಕ್ಷಕ್ಕೆ ಸೀಮಿತರಾದವರಲ್ಲ. ಪತ್ರಕರ್ತೆ ಹತ್ಯೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಳೆದು ತರುತ್ತಿರುವುದು ಸರಿಯಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದು, ಅಲ್ಲಿನ ಕಾನೂನು ಸುವ್ಯವಸ್ಥೆ ಜವಾಬ್ದಾರಿ ಅಲ್ಲಿನ ರಾಜ್ಯ ಸರ್ಕಾರದ್ದೇ ಆಗಿರುತ್ತದೆ. ಹೀಗಾಗಿ ಪ್ರಕರಣದಲ್ಲಿ ಪ್ರಧಾನಿ ಮೋದಿ ಅವರನ್ನು ಟೀಕಿಸುವುದು ಸರಿಯಲ್ಲ ಎಂದು ಗಡ್ಕರಿ ಹೇಳಿದ್ದಾರೆ.ಇದೇ ವೇಳೆ ರಾಹುಲ್ ಗಾಂಧಿ ಅವರು ಆರೋಪ ನಿರಾಧಾರವಾಗಿದ್ದು, ಅವರ ಹೇಳಿಕೆ ನಾಚಿಕೇಗೇಡು ಎಂದು ಅವರು ಟೀಕಿಸಿದ್ದಾರೆ.
ಇಂದು ಬೆಳಗ್ಗೆ ದೆಹಲಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಅಹಿಂಸೆಯೇ ಈ ದೇಶದ ಇತಿಹಾಸ. ಕೊಲೆಯನ್ನು ಯಾರೂ ಸಮರ್ಥಿಸುವಂತಿಲ್ಲ. ಪ್ರಧಾನಿ ಮೋದಿ ಅವರೋರ್ವ ಕೌಶಲ ಹಿಂದೂ ರಾಜಕಾರಣಿ. ಮೋದಿ ಏನೇ ಹೇಳಿದರೂ ಅದರಲ್ಲಿ ಎರಡು ಅರ್ಥವಿರುತ್ತದೆ. ಪ್ರಧಾನಿ ಮೋದಿ ಮೌನಿಯಲ್ಲ, ತಮ್ಮ ವಿರುದ್ಧ ಧನಿ ಎತ್ತಿದವರ ಧನಿ ಅಡಗಿಸುತ್ತಾರೆ. ಬಿಜೆಪಿ-ಆರ್ ಎಸ್ ಎಸ್ ಸಿದ್ಧಾಂತಗಳ ಬಗ್ಗೆ ಮಾತನಾಡಿದರೆ ಮತೀಯವಾದಿಗಳು ಕೊಲ್ಲುತ್ತಾರೆ ಎಂದು ಹೇಳಿದ್ದರು.
Comments