ಮಂಗಳೂರು ಚಲೋ ವಿಷಯದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ತರಾಟೆಗೆ ತಗೆದುಕೊಂಡ ದೇವೇಗೌಡರು

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು ‘ಮಂಗಳೂರು ವಿದ್ಯಮಾನ ಕುರಿತಂತೆ ಬಿಜೆಪಿ–ಕಾಂಗ್ರೆಸ್ ಪಕ್ಷಗಳ ನಡುವೆ ಶೀತಲ ಸಮರ ನೆಡಯುತ್ತಿದೆ.....
ಆದರೆ, ಅವು ಶಾಂತಿ, ಸಾಮರಸ್ಯ ಸ್ಥಾಪಿಸಲು ಪ್ರಯತ್ನಿಸುತ್ತಿವೆಯೋ ಅಥವಾ ಕದಡಲು ಪೈಪೋಟಿ ನಡೆಸುತ್ತಿವೆಯೋ ಎಂಬುದು ಅರ್ಥವಾಗುತ್ತಿಲ್ಲ. ಈ ಮೂಲಕ ರಾಷ್ಟ್ರ ಮತ್ತು ರಾಜ್ಯಕ್ಕೆ ಯಾವ ಸಂದೇಶ ನೀಡಲು ಹೊರಟಿವೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ವಾಗ್ದಾಳಿ ನಡೆಸಿದರು ಮತ್ತು ಎರಡೂ ರಾಷ್ಟ್ರೀಯ ಪಕ್ಷಗಳು ನಡೆಸುತ್ತಿರುವ ಪೈಪೋಟಿ ಯಾವ ಪುರುಷಾರ್ಥಕ್ಕೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಪ್ರಶ್ನಿಸಿದರೆ.
‘ಇದು ಸೂಕ್ಷ್ಮ ವಿಷಯ. ವಿಧಾನಸಭೆಯಲ್ಲಿ ಕುಳಿತು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಇಡೀ ರಾಜ್ಯಕ್ಕೆ ಅಪಾಯ. ಇದು ನನ್ನ ಅನುಭವದ ಮಾತು’ ಎಂದು ದೇವೇಗೌಡ ಸಲಹೆ ನೀಡಿದರು. ‘ರಾಜ್ಯದಲ್ಲಿ ಯುವಶಕ್ತಿಯ ದುರ್ಬಳಕೆಯಾಗುತ್ತಿದೆ. ಜೆ.ಎಚ್.ಪಟೇಲರು ಕೊನೆಯ ದಿನಗಳಲ್ಲಿ ಈ ದೇಶಕ್ಕೆ ಬಿಜೆಪಿ ಕಾನ್ಸರ್, ಕಾಂಗ್ರೆಸ್ ಶಾಪ ಎಂದು ಹೇಳಿದ ಮಾತನ್ನು ಈಗಲೂ ಸ್ಮರಿಸುತ್ತೇನೆ’ ಎಂದ ಅವರು, ‘ಎರಡೂ ರಾಷ್ಟ್ರೀಯ ಪಕ್ಷಗಳು ಶೀತಲ ಸಮರ ನಿಲ್ಲಿಸದಿದ್ದರೆ ರಾಜ್ಯದ ಜನತೆ ಪಾಠ ಕಲಿಸುವುದು ಖಚಿತ’ ಎಂದರು.
Comments