ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ, ನಾವು ಬಡವರ ಕಣ್ಣೀರು ಒರೆಸುತ್ತೇವೆ : ಎಚ್.ಡಿ ದೇವೇಗೌಡ

ದಾವಣಗೆರೆ : ಮಂಗಳೂರು ರ್ಯಾಲಿ ಮಾಡುವ ಮೂಲಕ ಬಿಜೆಪಿಯವರು ಯಾವ ಸಂದೇಶ ನೀಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ ಹೇಳಿದ್ದಾರೆ. ಮಂಗಳೂರಲ್ಲಿ ಅಶಾಂತಿ ಸೃಷ್ಟಿ ಗೆ ಎರಡೂ ರಾಷ್ಟ್ರೀಯ ಪಕ್ಷಗಳ ಆಂತರಿಕ ಜಗಳವೇ ಕಾರಣ ಎಂದಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಲು ಸಾಮೂಹಿಕ ನಾಯಕತ್ವದಲ್ಲಿ ಸಂಘಟನೆ ಮಾಡುತ್ತೇವೆ. ದಾವಣಗೆರೆಯಲ್ಲಿ ಜೆಡಿಎಸ್ ನ ಮುಖಂಡರು ಒಂದಾಗಿ ಹೋರಾಟ ಮಾಡುತ್ತಿದ್ದಾರೆ. ಈ ಮೂಲಕ ಪಕ್ಷಕ್ಕೆ ಶಕ್ತಿ ನೀಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಜನ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬುವುದಾಗಿ ಹೇಳಿದ್ದಾರೆ.
ಕುಮಾರಸ್ವಾಮಿಯವರು ಇಸ್ರೇಲ್ ಗೆ ಹೋಗಿದ್ದು ಅಲ್ಲಿನ ನೀರಾವರಿ, ಕೃಷಿ ಬಗ್ಗೆ ಅಧ್ಯಯನ ಮಾಡಲು . ರಾಜ್ಯದ ಜನರ ಹಿತ ದೃಷ್ಟಿಗಾಗಿ ಇಸ್ರೇಲ್ ಗೆ ಹೋಗಿದ್ದರು ,ಅವರಿಗೆ ರಾಜ್ಯದ ಜನರ ಬಗ್ಗೆ ಇರುವ ಕಾಳಜಿ ನೋಡಿ ನನಗೆ ಹೆಮ್ಮೆ ಎನಿಸುತ್ತದೆ ಎಂದಿದ್ದಾರೆ.
ಸಮಾಜದಲ್ಲಿ ಒಂದು ಕಡೆ ಶ್ರೀಮಂತರು ಮತ್ತೊಂದು ಕಡೆ ಬಡವರು ಇವರ ಮಧ್ಯೆ ನಾನು ನಿಂತಿದ್ದೇನೆ. ಜಾತಿ ಎಂಬುದನ್ನ ಬಿಟ್ಟು ಬಡವರ ಬಗ್ಗೆ ಗಮನ ಹರಿಸಬೇಕು. ಜೆಡಿಎಸ್ ಪಕ್ಷವನ್ನ ಅಧಿಕಾರಕ್ಕೆ ತನ್ನಿ. ನಾವು ಬಡವರ ಕಣ್ಣೀರು ಒರೆಸುವ ಕೆಲಸ ಮಾಡಿಸುತ್ತೇನೆ ಎಂದಿದ್ದಾರೆ.
Comments