ನದಿ ಜೋಡಣೆ ಹೇಗೆ ಸಾಧ್ಯ..? ನದಿ ಜೋಡಣೆಯನ್ನು ನಾನು ನೋಡುತ್ತೇನೋ ಇಲ್ಲವೋ…! ಎಚ್​​ಡಿಡಿ

04 Sep 2017 11:51 AM |
1197 Report

ಬೆಂಗಳೂರು: ನದಿ ಜೋಡಣೆ ಹೇಗೆ ಸಾಧ್ಯ? ಎಂದು ಜೆಡಿಎಸ್​ ವರಿಷ್ಟ ದೇವೇಗೌಡ ಪ್ರಶ್ನಿಸಿದ್ದಾರೆ, ಏಕೆಂದರೆ ನದಿಜೋಡಣೆಯಾಗಬೇಕಾದರೆ ಈಗಿರುವ ಸಂವಿಧಾನದಲ್ಲಿ ತಿದ್ದುಪಡಿತರಬೇಕು ಜೊತೆಗೆ ದೇಶದ ಎಲ್ಲಾ ರಾಜ್ಯಗಳು ಒಪ್ಪಬೇಕೆ ಎಂದು ಹೇಳುವ ಮೂಲಕ ನದಿ ಜೋಡಣೆ ಒಂದು ಸವಾಲಿನ ಯೋಜನೆ ಎಂದು ಹೇಳಿದ್ದಾರೆ.

ಮೋದಿ 286 ಸ್ಥಾನಗಳನ್ನಿಟ್ಟುಕೊಂಡು ಪ್ರಧಾನಿ ಆಗಿದ್ದಾರೆ ಆದರೆ ನಾನು 16 ಸಂಸದರ ಬೆಂಬಲದಿಂದ ಪ್ರಧಾನಿಯಾಗಿದ್ದೆ ಮೋದಿಯವರಿಗೆ ಕೆಲಸ ಮಾಡಲು ಹೆಚ್ಚಿನ ಅಧಿಕಾರವಿದೆ ಎಂದು ಹೇಳಿದರು.

ಈಗಿರುವ ರಾಜ್ಯ ಸರ್ಕಾರ ರೈತರ ಪರವಾಗಿಲ್ಲಾ ರೈತರ ಸಂಕಷ್ಟಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲಾ ಎಂದು ಹೇಳಿದರು. ಅದಕ್ಕಾಗಿಯೇ ರಾಜ್ಯ ರೈತರಲ್ಲಿನ ಆತಂಕ ದೂರ ಮಾಡಲು ಜೆಡಿಎಸ್​ ರಾಜ್ಯಾಧ್ಯಕ್ಷ ಈಗಾಗಲೇ ಇಸ್ರೇಲ್​ ಪ್ರವಾಸ ಕೈಗೊಂಡಿದ್ದಾರೆ ಮುಂದೆ ಸರ್ಕಾರ ಬಂದರೆ ರೈತರಿಗೆ ಅನುಕೂಲವಾಗಲಿದೆ ಎಂದರು.

ಇನ್ನು ಇದೇ ವೇಳೆ ಭಾರತದಲ್ಲಿ ಆಗುವ ನದಿ ಜೋಡಣೆಯನ್ನು ನಾನು ನೋಡುತ್ತೇನೊ ಇಲ್ಲವೋ ಎಂದು ಹೇಳುವ ಮೂಲಕ ತಮಗೆ ವಯಸ್ಸಾಗಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

Edited By

Hema Latha

Reported By

jds admin

Comments