ಇಸ್ರೇಲ್ ಪ್ರವಾಸ ಮುಗಿಸಿ ಬಂದ ಎಚ್ಡಿಕೆ ಕೃಷಿ ಬಗ್ಗೆ ಹೇಳಿದ್ದೇನು?
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್ ಪ್ರವಾಸ ಮುಗಿಸಿ ಬಂದು ಹೇಳಿದ್ಧು ಹೀಗೆ : ಇಸ್ರೇಲ್ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ಇಡೀ ಜಗತ್ತಿಗೇ ಮಾದರಿಯಾಗಿದೆ......
ಇಲ್ಲಿ ನೀರು ಎಂಬ ಮಾತೇ ಇಲ್ಲ. ಮಳೆಯೂ ಬೀಳುವುದಿಲ್ಲ. ವರ್ಷಕ್ಕೆ 20 ಇಂಚು ಮಳೆ ಬಿದ್ದರೆ ಅದೇ ದೊಡ್ಡದು. ಆದರೂ ಇಲ್ಲಿನ ಜನ ಸಮುದ್ರದ ನೀರನ್ನು ಜಾಣ್ಮೆಯಿಂದ ಬಳಸಿಕೊಂಡು ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ.ಇಲ್ಲಿನ ವಿಶ್ವವಿದ್ಯಾಲಯದಲ್ಲಿ ಮಾಹಿತಿ ಪಡೆದುಕೊಂಡಿದ್ದೇನೆ. ಇನ್ನು ಕೃಷಿ ಫೀಲ್ಡುಗಳಿಗೂ ತೆರಳಿ, ಅವರ ಸಾಧನೆಗೆ ಸಾಕ್ಷಿಭೂತನಾಗಿರುವೆ. ಬಯಾಲಜಿ, ಬಯೋಟೆಕ್ನಾಲಜಿ, ಅಕ್ವಾಕಲ್ಚರ್, ಪೌಲ್ಟ್ರಿ, ಪಾಚಿ ಬಗ್ಗೆ ತಿಳಿದು ಸಂತೋಷವಾಯಿತು. ಪಾಚಿಯನ್ನು ಬೆಳೆಸಿ, ಪೌಲ್ಟ್ರಿ ಮಾಡ್ತಾರೆ. ಇದನ್ನು ನಮ್ಮ ರಾಜ್ಯಕ್ಕೆ ತರುತ್ತೇನೆ.
ಪಾಪಾಸು ಕಳ್ಳಿ ವಿಷವಲ್ಲ; ನಿಜಕ್ಕೂ ಸಂಜೀವಿನಿ
ಇನ್ನು ಪಾಪಾಸು ಕಳ್ಳಿ ನಿಜಕ್ಕೂ ಸಂಜೀವಿನಿಯಾಗಿದೆ. ಇದರ ಹಾಲು ಅದ್ಭುತ. ನಾವು ಅದನ್ನು ವಿಷದಂತೆ ನೋಡುತ್ತೇವೆ. ಆದರೆ ಇಲ್ಲಿನವರು ಇದರಿಂದ ಪ್ರಯೋಜನ ಪಡೆಯುತ್ತಿರುವುದನ್ನು ನೋಡಿದರೆ ಅವರ ಬಗ್ಗೆ ಹೆಮ್ಮೆ ಮೂಡುತ್ತದೆ. ಈ ಪ್ರಯೋಗವನ್ನೂ ನಮ್ಮ ಕರ್ನಾಟಕಕ್ಕೆ ತರುತ್ತೇನೆ.
ನಮ್ಮ ರೈತರು ಹತಾಶರಾಗಿದ್ದಾರೆ. ಆತ್ಮಹತ್ಯೆಗಳು ಅದನ್ನೆಲ್ಲಾ ನೋಡುತ್ತಿದ್ದರೆ … ಇಸ್ರೇಲ್ ಕೃಷಿ ನಮ್ಮ ರೈತರಿಗೆ ನೀಡಿದರೆ ನಿಜಕ್ಕೂ ಅದು ದೊಡ್ಡ ಉಪಕಾರವಾದಂತಾಗುತ್ತದೆ. ಒಮ್ಮೆ ಇಸ್ರೇಲ್ ಕೃಷಿಗೆ ಮಾರುಹೋಗಿ ಅದನ್ನು ನಮ್ಮ ರೈತರು ಅಳವಡಿಸಿಕೊಂಡರೆ ಅವರ ಸಂಕಷ್ಟಗಳು ದೂರವಾಗುತ್ತದೆ. ರೈತರಲ್ಲಿ ಈ ಬಗ್ಗೆ ತಿಳಿವಳಿಕೆ ಮೂಡಿಸಬೇಕಾಗಿದೆ. ಇದಕ್ಕೆ ನಾನು ಕೈಜೋಡಿಸುತ್ತೇನೆ.
Comments